Home ಅಪರಾಧ ಬಿಜೆಪಿ ಅಭ್ಯರ್ಥಿ ವಿರುದ್ಧ ಅಪಪ್ರಚಾರ: ಐವರು ಪೊಲೀಸ್‌ ವಶಕ್ಕೆ

ಬಿಜೆಪಿ ಅಭ್ಯರ್ಥಿ ವಿರುದ್ಧ ಅಪಪ್ರಚಾರ: ಐವರು ಪೊಲೀಸ್‌ ವಶಕ್ಕೆ

0

ಚಿಕ್ಕೋಡಿ: ಬಿಜೆಪಿ ಅಭ್ಯರ್ಥಿ ಸೋಲುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಅಪ ಪ್ರಚಾರದ ಆರೋಪ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ಘೇರಾವ ಹಾಕಿದ್ದಾರೆ. ಬಿಹಾರ ಮೂಲದಿಂದ ಬಂದಿದ್ದ ಇಬ್ಬರು ಯುವತಿಯರು ಮೂವರು ಯುವಕರು ಭಾರತ Ni ನ್ಯೂಸ್ ಮೀಡಿಯಾ ಹೌಸ್ ರಿಸಲ್ಟ್ ಹೊರ ಬಂದಿದೆ. ಗೆಲ್ಲುವ ಅಭ್ಯರ್ಥಿ ಪ್ರೀಯಂಕಾ ಜಾರಕಿಹೊಳಿ ಆಗಿದ್ದು 3 ಲಕ್ಷಕ್ಕಿಂತ ಹಚ್ಚಿನ ಮತಗಳೊಂದಿಗೆ ಗೆಲುವು ಸಾಧಿಸಲಿದ್ದಾರೆ. ಪರಾಭವಗೊಂಡಿರುವ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಎಂದು ಬರೆದು ಮನೆ ಮನೆಗೆ ಟಪಾಲ ಕಾರ್ಡ್ ಹಂಚಿಕೆ ಮಾಡುತ್ತಿದ್ದರು.
ಇದು ಕಾಂಗ್ರೆಸ್ ಕಾರ್ಯಕರ್ತರ ಕುತಂತ್ರ ಎಂದು ಬಿಜೆಪಿ ಆರೋಪ ಮಾಡಿದ್ದು, ಪ್ರೀಯಂಕಾ ಜಾರಕಿಹೊಳಿ ಹಣ ಖರ್ಚು ಮಾಡಿ ಅಪ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಸೋಲುವ ಭೀತಿಯಿಂದ ಕಾರ್ಡ್ ಹಂಚಿ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಐವರು ಪೊಲೀಸ್ ವಶದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Exit mobile version