ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ

0
41

ಬಾಲಿವುಡ್​ ಖ್ಯಾತ ನಟಿ ಮಲೈಕಾ ಅರೋರಾ ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ ಎನ್ನಲಾಗಿದೆ.
ಮುಂಬೈನ ಬಾಂದ್ರಾ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಅನಿಲ್ ಅರೋರಾ ಅವರು ತಮ್ಮ 6 ಅಂತಸ್ತಿನ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದ್ದು, ಇನ್ನಷ್ಟೇ ಸಂಪೂರ್ಣ ವಿವರ ಹೊರಬರಬೇಕಿದೆ. ಸದ್ಯ ಪೊಲೀಸ್​ ತಂಡ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಮಲೈಕಾ ಅರೋರ ತಂದೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಅನಿಲ್ ಅರೋರಾ ಅವರು ಮಲೈಕಾ ತಾಯಿ ಜಾಯ್ಸ್ ಪಾಲಿಕಾರ್ಪ್ ಡಿವೋರ್ಸ್ ಪಡೆದಿದ್ದರು.

Previous articleಅರಣ್ಯ ಹುತಾತ್ಮರು ಮನುಕುಲದ ಸಂರಕ್ಷಕರು
Next articleವಿಕ್ಕಿ ಈಗ ವಂಶಿ