Home ಅಪರಾಧ ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಸರಗಳ್ಳ

ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಸರಗಳ್ಳ

0

ಕುಳಗೇರಿ ಕ್ರಾಸ್: ಬಸ್ ಇಳಿದು ಮುಂದೆ ಸಾಗುತ್ತಿದ್ದ ವೇಳೆ ಮಹಿಳೆಯ ಕುತ್ತಿಗೆಗೆ ಕೈಹಾಕಿ ಚಿನ್ನದ ಮಾಂಗಲ್ಯ ಸರ ಹರಿದು ಪರಾರಿ ಯಾಗುತ್ತಿದ್ದ ವ್ಯಕ್ತಿಯನ್ನ ಹಿಡಿದು ಥಳಿಸಿದ ಸಾರ್ವಜನಿಕರು ನಂತರ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಗ್ರಾಮದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಆಂಧ್ರಮೂಲದವನಾದ ಪಂಕಮ್ ಪವನ ಕುಮಾರ್(೩೩) ಎಂಬ ವ್ಯಕ್ತಿ ಸರಗಳ್ಳತನ ಮಾಡುವ ವೇಳೆ ಸಿಕ್ಕಿ ಬಿದ್ದಿದ್ದು ಸಾರ್ವಜನಿಕರು ಗ್ರಾಮಸ್ಥರು ಥಳಿಸಿದ್ದಾರೆ ಈತನಿಂದ ಆಧಾರ ಕಾರ್ಡ್ ದೊರಕಿದ್ದು ಹೆಚ್ಚಿನ ವಿಚಾರಣೆಗೆ ಬಾದಾಮಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.ರಾಮದುರ್ಗದಿಂದ ಒಂದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಕುಳಗೇರಿ ಬಸ್ ನಿಲ್ದಾಣಕ್ಕೆ ಇಳಿದಿದ್ದಾರೆ. ಆಗ ಈತ ಚನ್ನದ ಸರ ಹರಿದು ಓಡಿ ಹೋಗುತ್ತಿದ್ದನೆಂದು ಹೇಳಲಾಗಿದೆ. ಮಹಿಳೆಗೆ ಜೋರಾದ ಪೆಟ್ಟು ಬಿದ್ದಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆದರೆ ಚಿನ್ನದ ಸರ ತುಂಡಾಗಿದ್ದರಿಂದ ವಾಪಸ್ಸು ಮಾಡಿದ್ದೇನೆ ನನಗೆ ಹೊಡೆಯುತ್ತಿದ್ದರಿಂದ ಓಡಿ ಹೋಗಿ ತಪ್ಪಸಿಕೊಳ್ಳಲು ಯುತ್ನಿಸದೆ ನಾನು ಅಂಥವನಲ್ಲವೆಂದು ಅಲವತ್ತುಕೊಂಡಿದ್ದಾನೆ. ವಿಚಾರಣಾ ವೇಳೆಯಲ್ಲಿ ವಿವರ ನೀಡಿದ್ದಾನೆಂದು ಬಾದಾಮಿ ಪಿಎಸ್‌ಐ ನಿಂಗಪ್ಪ ಪೂಜಾರ ಪತ್ರಿಕೆಗೆ ತಿಳಿಸಿದ್ದಾರೆ.

Exit mobile version