Home ಅಪರಾಧ ಬಸ್‌ಗೆ ಡಿಕ್ಕಿ ಹೊಡೆದು ಟ್ರ್ಯಾಕ್ಟರ್ ಪಲ್ಟಿ: ಮಹಿಳೆ ಸಾವು, ೧೮ ಜನರಿಗೆ ಗಾಯ

ಬಸ್‌ಗೆ ಡಿಕ್ಕಿ ಹೊಡೆದು ಟ್ರ್ಯಾಕ್ಟರ್ ಪಲ್ಟಿ: ಮಹಿಳೆ ಸಾವು, ೧೮ ಜನರಿಗೆ ಗಾಯ

0

ಮುದಗಲ್ಲ: ಸಮೀಪದ ಬನ್ನಿಗೋಳ ಗ್ರಾಮದ ಹತ್ತಿರ ಕೃಷಿ ಚಟುವಟಿಕೆಗೆ ಟ್ರ್ಯಾಕ್ಟರ್ ದಲ್ಲಿ ಬೆಳಿಗ್ಗೆ ೫ ಘಂಟೆಗೆ ತೆರಳುತ್ತಿರುವಾಗ ಅಂಕಲಿಮಠದ ಕಡೆಯಿಂದ ಬರುತ್ತಿರುವ ಸಾರಿಗೆ ಬಸ್ ಗೆ ಅಪಘಾತವಾಗಿದ್ದರಿಂದ ಟ್ರ್ಯಾಕ್ಟರ್ ಟ್ರ್ಯಾಲಿ ಪಲ್ಟಿಯಾಗಿ ಮಹೀಳೆ ಸ್ಥಳದಲ್ಲಿಯೇ ಸಾವನ್ಮಪ್ಪಿದ್ದಾಳೆ. ೧೮ ಜನರಿಗೆ ತೀವ್ರ ತರಹದ ಗಾಯಗಳಾಗಿವೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಚಾಲಕನೂ ಗಾಯಗೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್ಐ ವೆಂಕಟೇಶ ಮಾಡಗೇರಿ, ಅಪರಾಧ ವಿಭಾಗದ ಪಿಎಸ್ಐ ಛತ್ರಪ್ಪ ರಾಠೋಡ ಸೇರಿದಂತೆ ಮುಂತಾದವರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version