ಹುಬ್ಬಳ್ಳಿ: ರಾಜ್ಯ ಸರಕಾರ ಪೊಲೀಸ್ ಠಾಣೆಗಳನ್ನು ಹರಾಜಿಗಿಟ್ಟಿದ್ದು, ಅಧಿಕಾರಿಗಳು ಹರಾಜಿನ ಮೂಲಕ ಠಾಣೆಗಳಿಗೆ ಹೋಗಬೇಕಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಕೆಲಸ ಮಾಡ್ತಾರೋ ಇಲ್ಲವೋ ನೋಡಲ್ಲ. ಹರಾಜಿನ ಮೂಲಕ ಟ್ರಾನ್ಸಫರ್ ಆಗುತ್ತಾರೆ. ಪೋಸ್ಟಿಂಗ್ ತೆಗೆದುಕೊಂಡ ಮೇಲೆ ಅಧಿಕಾರಿಗಳು ಅನಿವಾರ್ಯವಾಗಿ ಕಲೆಕ್ಷನ್‌ಗೆ ನಿಲ್ಲಬೇಕಾಗುತ್ತೆ. ಇದು ಅಧಿಕಾರಿಗಳ ತಪ್ಪಲ್ಲ ಸರಕಾರದ ತಪ್ಪು ಎಂದರು.