ಪಾಕ್‌ ಗುಂಡಿನ ದಾಳಿ: ಬಿಎಸ್‌ಎಫ್ ಯೋಧ ದೀಪಕ್ ಹುತಾತ್ಮ

ಶ್ರೀನಗರ: ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧ ದೀಪಕ್ ಚಿಮಂಗ್‌ಖಾಮ್ ಹುತಾತ್ಮರಾಗಿದ್ದಾರೆ.
ಜಮ್ಮು ಕಾಶ್ಮೀರ ಗಡಿಭಾಗವಾದ ಆರ್‌ಎಸ್ ಪುರದಲ್ಲಿ ಮೇ 10ರಂದು ಭಾರತದ ವಿರುದ್ಧ ಪಾಕ್ ನಡೆಸಿದ ಗುಂಡಿನ ದಾಳಿಯಲ್ಲಿ ಪ್ರತಿದಾಳಿ ನಡೆಸುವ ಸಂದರ್ಭ ದೀಪಕ್ ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ.
ಪಲೌರಾದ ಫ್ರಂಟಿಯರ್ ಪ್ರಧಾನ ಕಚೇರಿ ಜಮ್ಮುವಿನಲ್ಲಿ ದೀಪಕ್ ಅವರ ಅಂತ್ಯಕ್ರಿಯೆಯನ್ನು ಸೋಮವಾರ ಸೇನಾ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಬಿಎಎಸ್‌ಎಫ್ ಡಿಜಿ ತಿಳಿಸಿದ್ದಾರೆ.