ಬೆಂಗಳೂರು: ಪಹಲ್ಗಾಮ್‌ನಲ್ಲಿ ಉಗ್ರರದಾಳಿ ನಡೆದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತೀರ್ಮಾನಿಸಿರುವಂತೆ ಸಿಂಧೂನದಿಯ ನೀರು ನಿಲ್ಲಿಸುವುದು ಸಾಧ್ಯವೇ? ಎಂದು ಪ್ರಶ್ನಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಈ ವಿಚಾರಗಳೆಲ್ಲವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದ ಆಗಿ ಸಹಿ ಆಗಿರುತ್ತದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿಯೇ ದಾಳಿಗಳಾಗುತ್ತದೆ. ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಳ್ಳುವ ಪರಿಪಾಠ ನಡೆದುಬಂದಿದೆ. ದಾಳಿ ನಡೆದ ದಿನ ಪ್ರಧಾನಿ ಕಾಶ್ಮೀರಕ್ಕೆ ಹೋಗದೆ, ಬಿಹಾರದ ಎಲೆಕ್ಷನ್ ಪ್ರಚಾರಕ್ಕೆ ಹೋಗಬೇಕಿತ್ತಾ? ಪಹಲ್ಗಾಮ್ ರಕ್ಷಣೆ ಸೇನೆ ಮತ್ತು ಸರ್ಕಾರಗಳದ್ದೇ ಅಲ್ಲವೇ. ಘಟನೆ ನಡೆದ ತಕ್ಷಣ ಅಲ್ಲಿಗೆ ತೆರಳಲು ಭದ್ರತಾ ಪಡೆಗಳು ವಿಳಂಬ ಮಾಡಿದ್ದೇಕೆ? ಉಗ್ರರ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ. ಇವರ ಮನೆ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದು ಯಾರು? ಎಂದು ಲಾಡ್ ಪ್ರಶ್ನಿಸಿದರು.