ಪಹಲ್ಗಾಮ್ ದಾಳಿಗೆ ರಾಕೇಶ್ ಖಂಡನೆ ಶ್ರದ್ಧಾಂಜಲಿ ಸಲ್ಲಿಸಿದ ಆರ್ ಪಿಎಸ್

ಬೆಂಗಳೂರು : ಹಿಂದೂ ಪ್ರವಾಸಿಗರ ಮೇಲೆ ನರಮೇಧ ನಡೆಸಿದ ಪಹಲ್ಗಾಮ್ ಘಟನೆಯನ್ನು ರಾಷ್ಟ್ರೀಯ ಪ್ರಜಾಪ್ರಭುತ್ವ ಸೇನೆ (RPS) ತೀವ್ರವಾಗಿ ಖಂಡಿಸಿದೆ.

ಫ್ರೀಡಂ ಪಾರ್ಕ್‌ನಲ್ಲಿ ದಾಳಿಯಲ್ಲಿ ಮೃತಪಟ್ಟ 28 ಮಂದಿಗೆ ಶ್ರದ್ದಾಂಜಲಿ ಸಲ್ಲಿಸುವ ಮೊಂಬತ್ತಿ ಕಾರ್ಯಕ್ರಮದಲ್ಲಿ ನೂರಾರು ನಾಗರಿಕರ ಭಾಗವಹಿಸಿ ಕಂಬನಿ ಮಿಡಿದರು.

RPS ಅಧ್ಯಕ್ಷ. ರಾಕೇಶ್ ಎಂ. ದೇಸರ್ಲಾ ಮಾತನಾಡಿ,
ಇದು ಕೇವಲ ಶ್ರದ್ಧಾಂಜಲಿ ಕಾರ್ಯಕ್ರಮವಲ್ಲ – ಇದು ಭಾರತದ ಆತ್ಮದ ಧ್ವನಿಯಾಗಿದೆ. ಉಗ್ರರ ಧ್ವನಿ ಅಡಗಿಸಲು ಸರ್ಕಾರ ಮುಂದಾಗಬೇಕಿದೆ ಎಂದರು.

ನಾವು ಯಾವುದೇ ಘೋಷಣೆ ಮಾಡುವುದಿಲ್ಲ. ರಾಜಕೀಯ ಭಾಷಣಗಳು ಇಲ್ಲ. ಕೇವಲ ಶ್ರದ್ಧೆಯ ಮೌನ ಮತ್ತು ಜ್ಯೋತಿಯ ಪ್ರತೀಕ ಎಂದರು.

RPS ಎಂದಿಗೂ ಭಯೋತ್ಪಾದನೆ ವಿರುದ್ಧ ಶಾಂತಿಯ ಮತ್ತು ಏಕತೆಯ ಹೋರಾಟ ಮುಂದುವರಿಸಲಿದೆ ಎಂದು ರಾಕೇಶ್ ಹೇಳಿದರು.

ಈ ಕಾರ್ಯಕ್ರಮದಲ್ಲಿ RPS ಸದಸ್ಯರು, ಯುವಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.