Home News ಪಲ್ಲವಿ ಅನು ಪಲ್ಲವಿಗೆ 42ರ ಸಂಭ್ರಮ

ಪಲ್ಲವಿ ಅನು ಪಲ್ಲವಿಗೆ 42ರ ಸಂಭ್ರಮ

ಚಿತ್ರದ ಸಂಗೀತ ಇನ್ನು ಶಾಶ್ವತವಾಗಿ ಉಳಿದಿದೆ

1983ರಲ್ಲಿ ಬಿಡುಗಡೆಯಾದ ‘ಪಲ್ಲವಿ ಅನು ಪಲ್ಲವಿ’ ಸಿನಿಮಾ 42 ವರ್ಷ ಪೂರೈಸಿದೆ.
ಈ ಕುರಿತಂತೆ ನಟ ಅನಿಲ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಪಲ್ಲವಿ ಅನು ಪಲ್ಲವಿಗೆ 42 ವರ್ಷ ಕಳೆದಿದೆ ಇಂದಿಗೂ ಇಳಯರಾಜ ಅವರ ಮಧುರ ಗೀತೆಗಳು ಇನ್ನೂ ಶಕ್ತಿಯುತವಾಗಿ ಪ್ರತಿಧ್ವನಿಸುತ್ತಿವೆ. ಪಲ್ಲವಿ ಅನು ಪಲ್ಲವಿ ಚಿತ್ರ 42 ವರ್ಷಗಳನ್ನು ಪೂರೈಸಿದೆ. ಆದರೆ, ಚಿತ್ರದ ಸಂಗೀತವು ಶಾಶ್ವತವಾಗಿ ಉಳಿದಿದೆ!’ ಎಂದು ಬರೆದಿದ್ದಾರೆ.
ಈ ಚಿತ್ರದಲ್ಲಿ ನಟ ಅನಿಲ್ ಕಪೂರ್, ನಟಿ ಲಕ್ಷ್ಮಿ ಮತ್ತು ಕಿರಣ್ ವೈರಾಲೆ ಮುಖ್ಯ ಭೂಮಿಕೆಯಲ್ಲಿದ್ದರು. ಇಳಯರಾಜ ಅವರ ಸಂಗೀತ ಸಂಯೋಜನೆ ಮಾಡಿರುವ ಈ ಸಿನಿಮಾವನ್ನು ಮಣಿರತ್ನಂ ಅವರು ನಿರ್ದೇಶನ ಮಾಡಿದ್ದರು. ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಬಾಲು ಮಹೇಂದ್ರ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

Exit mobile version