Home ತಾಜಾ ಸುದ್ದಿ ಪಂ.ಗಣಪತಿ ಭಟ್ ಹಾಸಣಗಿಯವರಿಗೆ “ಪುಟ್ಟರಾಜ ಸಮ್ಮಾನ’

ಪಂ.ಗಣಪತಿ ಭಟ್ ಹಾಸಣಗಿಯವರಿಗೆ “ಪುಟ್ಟರಾಜ ಸಮ್ಮಾನ’

0

ಧಾರವಾಡ: ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯಕರು, ಭಾರತದ ಎಲ್ಲ ಸಂಗೀತ ಪ್ರೇಮಿಗಳ ಕಣ್ಮಣಿ ಪಂಡಿತ ಗಣಪತಿ ಭಟ್ ಹಾಸಣಗಿ ಅವರಿಗೆ ಪುಟ್ಟರಾಜ ಸಮ್ಮಾನ' ಪ್ರಶಸ್ತಿಯನ್ನು ನಗರದ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನವು ಘೋಷಿಸಿದೆ. ಮಾರ್ಚ್ 3ರಂದು ನಗರದ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ್ ಸಭಾಂಗಣದಲ್ಲಿ ಪಂ.ಗಣಪತಿ ಭಟ್ ಹಾಸಣಗಿ ಅವರಿಗೆ ೨೦೨೫ನೇ ಸಾಲಿನಪುಟ್ಟರಾಜ ಸಮ್ಮಾನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ೧ ಲಕ್ಷ ರೂ ನಗದು, ಸ್ಮರಣಿಕೆಯನ್ನೊಳಗೊಂಡಿದೆ ಎಂದು ಪ್ರತಿಷ್ಠಾನವು ತಿಳಿಸಿದೆ.
ಪಂಚಾಕ್ಷರ ಗವಾಯಿಗಳ ಪರಂಪರೆಯಲ್ಲಿ ಹರಿದು ಬೆಳೆದ ಪಂ.ಬಸವರಾಜ ರಾಜಗುರುಗಳ ಪರಂಪರೆಯ ವಾರಸುದಾರರಾದ ಪಂ.ಗಣಪತಿ ಭಟ್ ಹಾಸಣಗಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಿದೆ.
ಪಂಡಿತ ಗಣಪತಿ ಭಟ್ಟ ಹಾಸಣಗಿಯವರ ಸಾಧನೆ
೧೯೬೦ರ ದಶಕದಲ್ಲಿ ಗಾಯನವಿದ್ಯೆಯನ್ನು ಅರಸಿಕೊಂಡು ಧಾರವಾಡಕ್ಕೆ ಬಂದ ಪಂಡಿತ ಗಣಪತಿ ಭಟ್ ಹಾಸಣಗಿ ಅವರು ಪಂ.ಬಸವರಾಜ ರಾಜಗುರುಗಳ ಶಿಷ್ಯರಾಗಿ ಸಂಗೀತ ಕಲಿಯಲು ಆರಂಭಿಸಿದರು. ಬಳಿಕ ಸುಮಾರು ಇಪ್ಪತ್ತೈದು ವರ್ಷಗಳಿಗೂ ಅಧಿಕಕಾಲ ಬಸವರಾಜ ರಾಜಗುರುಗಳ ಶಿಷ್ಯರಾಗಿ ಸಾಧನೆಗೈದವರು. ಮುಂದೆ ತೊಂಭತ್ತರ ದಶಕದಲ್ಲಿ ಮಹಾರಾಷ್ಟ್ರದಾದ್ಯಂತ ತಮ್ಮ ಅವಿರತ ಕಾರ್ಯಕ್ರಮಗಳ ಬಿಡುವಿನ ವೇಳೆಯಲ್ಲಿ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಗ್ವಾಲಿಯರ್ ಘರಾಣೆಯ ಶ್ರೇಷ್ಠ ವಿದ್ವಾಂಸರಲ್ಲೊಬ್ಬರಾದ ಪಂ. ಸಿ.ಆರ್.ವ್ಯಾಸ್ ಅವರಲ್ಲಿ ಅಧ್ಯಯನವನ್ನು ಮುಂದುವರೆಸಿದರು. ಪಂ.ಗಣಪತಿ ಭಟ್ ಹಾಸಣಗಿ ಅವರು ದೇಶದಾದ್ಯಂತವಲ್ಲದೇ ಅಂತಾರಾಷ್ಟ್ರೀಯ ಸ್ಥರದಲ್ಲಿಯೂ ಕಿರಾಣಾ-ಗ್ವಾಲಿಯರ್ ಪರಂಪರೆಯ ಮಹಾನ್ ಗಾಯಕರಾಗಿ ಪ್ರಸಿದ್ಧಿ ಪಡೆದಿದ್ದಾರೆ.

Exit mobile version