ಕಸಬಾಠಾಣೆ ಪೊಲೀಸರು ೧೮ ಮಂದಿ ಅಂಗನವಾಡಿ ಕಾರ್ಯಕರ್ತರು ಸೇರಿ ೨೬ ಮಂದಿಯನ್ನು ಬಂಧಿಸಿದ್ದು, ಇದೇ ಪ್ರಕರಣದಲ್ಲಿ ಮತ್ತೇ ೬ ಜನರನ್ನು ಬಂಧಿಸಿದ್ದು, ಆರೋಪಿತರ ಸಂಖ್ಯೆ ೩೨ ಕ್ಕೆ ಏರಿದೆ.
ಹುಬ್ಬಳ್ಳಿ: ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ವಿತರಿಸುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಹಳೇಗಬ್ಬೂರಿನ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ, ಕಸಬಾಠಾಣೆ ಪೊಲೀಸರು ೧೮ ಮಂದಿ ಅಂಗನವಾಡಿ ಕಾರ್ಯಕರ್ತರು ಸೇರಿ ೨೬ ಮಂದಿಯನ್ನು ಬಂಧಿಸಿದ್ದು, ಇದೇ ಪ್ರಕರಣದಲ್ಲಿ ಮತ್ತೇ ೬ ಜನರನ್ನು ಬಂಧಿಸಿದ್ದು, ಆರೋಪಿತರ ಸಂಖ್ಯೆ ೩೨ ಕ್ಕೆ ಏರಿದೆ.
ಸೋನಿಯಾಗಾಂಧಿನಗರದ ಅಲ್ತಾಫ ಕಲಾದಗಿ, ಬಂಕಾಪೂರ ಚೌಕ್‌ದ ದಾದಾಪೀರ ಚೌಧರಿ, ಕೇಶ್ವಾಪುರದ ಸಲೀಂ ಬೇಪಾರಿ, ಉದಯನಗರದ ಸಲೀಂ ಶೇಖ, ಮೆಹಬೂಬನಗರದ ಸಲೀಂ ಅತ್ತಾರ, ಬಂಕಾಪೂರ ಚೌಕ್‌ನ ಬಸವರಾಜ ವಾಲ್ಮೀಕಿ ಬಂಧಿತರು.