Home ತಾಜಾ ಸುದ್ದಿ ನೈಸರ್ಗಿಕ ಸಂಪತ್ತಿನ ಮೇಲೆ ಕಣ್ಣಿಟ್ಟವರಿಗೆ ಮತ ಕೊಡಬೇಡಿ

ನೈಸರ್ಗಿಕ ಸಂಪತ್ತಿನ ಮೇಲೆ ಕಣ್ಣಿಟ್ಟವರಿಗೆ ಮತ ಕೊಡಬೇಡಿ

0

ಬಳ್ಳಾರಿ: ಸಂಡೂರು ಮತ ಕ್ಷೇತ್ರ ಅತ್ಯಂತ ‌ಸಂಪದ್ಬರಿತವಾಗಿದ್ದು, ಅಲ್ಲಿನ ನೈಸರ್ಗಿಕ ಸಂಪತ್ತಿನ ಮೇಲೆ ಕಣ್ಣಿಟ್ಟು ಚುನಾವಣೆಗೆ ಬಂದವರನ್ನು ಸೋಲಿಸಿ,‌ ಸ್ಥಳೀಯರನ್ನೇ ಗೆಲ್ಲಿಸಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕೆಸಿ ಕೊಂಡಯ್ಯ ಹೇಳಿದರು.
ಬಳ್ಳಾರಿಯ ಬಾಲಾ‌ ಹೋಟೆಲ್ ನಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ೨೦೦೪ ರಿಂದ ೨೦೧೦ ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ‌ನಡೆಸಿದವರು, ಗಣಿ ಸಂಪತ್ತನ್ನು ಲೂಟಿ ಮಾಡಿದವರೆಲ್ಲ ಬಿಜೆಪಿ ಅಭ್ಯರ್ಥಿ ಪರ ನಿಂತು ಪ್ರಚಾರ ಮಾಡುತ್ತಿದ್ದಾರೆ. ಅವರ ಉದ್ದೇಶ ಸಂಡೂರು ಮತ ಕ್ಷೇತ್ರ ‌ಅಭಿವೃದ್ದಿ‌‌ ಮಾಡುವುದಾಗಿಲ್ಲ. ಅಲ್ಲಿನ ಅದಿರು ಸಂಪತ್ತು, ಮ್ಯಾಂಗನೀಸ್ ನ್ನು ಲೂಟಿ‌ ಮಾಡುವುದಾಗಿದೆ ಎಂದು ಪರೋಕ್ಷವಾಗಿ ಜನಾರ್ದನರೆಡ್ಡಿ ವಿರುದ್ದ‌ ವಾಗ್ದಾಳಿ ನಡೆಸಿದ ಕೊಂಡಯ್ಯ ಅವರು ಮತ್ತೊಮ್ಮೆ ಗಣಿ‌ಗಾರಿಕೆ ಮೂಲಕ ಇಲ್ಲಿನ ಸಂಪತ್ತು ಲೂಟಿಗೆ ಸಂಡೂರಿನ ಜನ ಅವಕಾಶ ಮಾಡಿಕೊಡ ಬಾರದು. ಸಂಡೂರಿನವರೇ ಆದ ಇ.ತುಕಾರಂ ‌ಪತ್ನಿ ಅನ್ನಪೂರ್ಣ ಅವರನ್ನೇ ಗೆಲ್ಲಿಸುವ ಮೂಲಕ ಸಂಡೂರಿನ ಅಭಿವೃದ್ದಿಗೆ ಬೆಂಬಲ‌ ಕೊಡಿ ಎಂದು ಮನವಿ‌ ಮಾಡಿದರು.
ಸಂಡೂರು ಶಾಂತಿಗೆ ಹೆಸರುವಾಸಿಯಾಗಿದೆ. ಧಾರ್ಮಿಕವಾಗಿ ವಿಶ್ವ‌ವಿಖ್ಯಾತವೂ ಆಗಿದೆ. ಆದರೆ ಬಿಜೆಪಿಯವರಿಗೆ ಇಲ್ಲಿ ಅವಕಾಶ ಕೊಟ್ಟರೇ, ದೌರ್ಜನ್ಯ, ದಬ್ಬಾಳಿಕೆ ನಡೆಯಲಿದೆ. ಸಂಡೂರಿನಲ್ಲಿ‌ನ‌ ಭಾವೈಕ್ಯತೆಗೆ ಧಕ್ಕೆಯಾಗಲಿದೆ ಎಂದು ಕೊಂಡಯ್ಯ ಅವರು ಹೇಳಿದರು.

Exit mobile version