ಬನಹಟ್ಟಿಯ ನೇಕಾರ ಸಂಗಮೇಶ ಮುರಗೋಡ(೪೫) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವದಕ್ಕೆ ಮೈಕ್ರೋ ಫೈನಾನ್ಸ್ ಹಾಗೂ ಸಹಕಾರಿ ಸಂಘಗಳೇ ನೇರ ಕಾರಣವೆಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಆರೋಪಿಸಿದರು.
ಬಡತನದಲ್ಲಿಯೇ ಬದುಕು ನಿರ್ವಹಿಸುತ್ತಿರುವ ನೇಕಾರರಿಗೆ ಸಾಲದ ಬಡ್ಡಿ ಸವಾಲಾಗಿ ಕಾಡುತ್ತಿದೆ. ಈ ಕುರಿತು ಜವಳಿ ಸಚಿವ ಶಿವಾನಂದ ಪಾಟೀಲರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆಂದು ಕೊಣ್ಣೂರ ತಿಳಿಸಿದರು.
ಸೋಮವಾರ ಮೃತ ಮುರಗೋಡ ಕುಟುಂಬಕ್ಕೆ ಭೆಟ್ಟಿ ನೀಡಿ ಸಾಂತ್ವನ ಹೇಳಿದರು. ನೇಕಾರರ ಸಮಸ್ಯೆಗಳ ಸರಮಾಲೆಯೇ ಇದ್ದು, ಈ ಕುರಿತಾಗಿ ಸರ್ಕಾರಕ್ಕೆ ಮನದಟ್ಟು ಮಾಡುವ ಮುಖೇನ ನೇಕಾರ ಸಮುದಾಯಕ್ಕೆ ಆಗುತ್ತಿರುವ ತೊಡಕುಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ಮುಂದಾಗಬೇಕಿದೆ ಎಂದರು.