ನೀವ್ ಗೆಲ್ಲೋದ್ ಯಾವಾಗ…?

0
9

ಉಪೇಂದ್ರ ಸೋಲು ಗೆಲವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ ! ಎಂತಾ ನಿಸ್ವಾರ್ಥ ! ಎಂತಾ ತ್ಯಾಗ ಮನೋಭಾವ ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ

ಬೆಂಗಳೂರು: ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ ಎಂದು ನಟ ಉಪೇಂದ್ರ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶ ನಂತರ ಪ್ರಜಾಪ್ರಭುಗಳನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್…
ಉಪೇಂದ್ರ ಸೋಲು ಗೆಲವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ ! ಎಂತಾ ನಿಸ್ವಾರ್ಥ ! ಎಂತಾ ತ್ಯಾಗ ಮನೋಭಾವ ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ 🙏🙏🙏
ಡೋಂಟ್ ವರೀ… ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ 👍😃
ಗೆದ್ದೇ ಗೆಲ್ತೀನಿ 💪
ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ 🙏
ನೆಕ್ಸ್ಟ್ ಎಲೆಕ್ಷನ್ ನಲ್ಲಿ ನನಗ್ ಕೆಲ್ಸಾ ಕೊಡ್ತೀರ ಅಂದ್ರೆ ನಿಲ್ತೀನಿ ಆಗ್ಲೂ ನೀವ್ ಎಮೋಸನಲ್ ಪ್ರಚಾರ ಮಾಡ್ರೀ ….. ಸಭೆ ಸಮಾರಂಬ ಎಲ್ಲಾ ಮಾಡ್ರೀ ….
ಕಷ್ಟ ಪಡ್ರೀ …..
ಆಮೇಲ್ ಐದು ವರ್ಸ ನೀವೇನ್ ಬೇಕಾದ್ರೂ ಮಾಡ್ಕಳಿ ನಾವ್ ಕೇಳಕ್ ಬರಲ್ಲ ಅಂದ್ರೆ…… ಉಸ್.. ಏನ್ ಬರೀಬೇಕೋ ಗೊತ್ತಾಗ್ತಿಲಿರಪ್ಪೋ 🙏
ಈ ದಡ್ ನನ್ ಮಗಂಗೇ ಯಾವೋನಾದ್ರ ಇನ್ ಮೇಲೆ ಬುದ್ದಿವಂತಾ ಅಂದ್ರೇ ಅಷ್ಟೇ… ಸೆಂದಾಗಿರಕ್ಕಿಲ್ಲಾ …. 😡😡 ಎಂದಿದ್ದಾರೆ

Previous articleವಿಧಾನ ಪರಿಷತ್‌ ಚುನಾವಣೆ: 11 ಅಭ್ಯರ್ಥಿಗಳು ಅವಿರೋಧ ಆಯ್ಕೆ
Next articleಪ್ರಜ್ವಲ್ ರೇವಣ್ಣ ಮತ್ತೆ ಎಸ್ಐಟಿ ಕಸ್ಟಡಿಗೆ