Home ತಾಜಾ ಸುದ್ದಿ ನೀವು ಸಚಿವರು; ಏನು ಮಾತನಾಡಬೇಕೆಂದು ತಿಳಿಯದೇ..?

ನೀವು ಸಚಿವರು; ಏನು ಮಾತನಾಡಬೇಕೆಂದು ತಿಳಿಯದೇ..?

0

ನವದೆಹಲಿ: ಸನಾತನ ಧರ್ಮದ ಸಂಬಂಧ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ. ಸನಾತನ ಧರ್ಮ ನಿರ್ಮೂಲಿಸಬೇಕೆಂಬ ಉದಯನಿಧಿ ಹೇಳಿಕೆ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಎಂದು ನ್ಯಾಯಮೂರ್ತಿಗಳು ಟೀಕಿಸಿದರು. ನೀವು ಸಾಮಾನ್ಯ ಜನರಲ್ಲ. ಸಚಿವ ಸ್ಥಾನದಂತಹ ಉನ್ನತ ಜವಾಬ್ದಾರಿಯಲ್ಲಿರುವವರು. ಏನು ಮಾತನಾಡಬೇಕು. ಏನು ಮಾತನಾಡಬೇಕು ಎಂಬ ಅರಿವಿರಬೇಕು. ಸಚಿವರಾಗಿ ನೀವೇ ಕಾನೂನಿನ ರಕ್ಷಣೆಗಾಗಿ ನಮ್ಮ ಬಳಿ ಬಂದಿದ್ದೀರಿ ಎಂದು ನ್ಯಾಯಾಲಯ ಖಾರವಾಗಿ ಪ್ರಶ್ನಿಸಿತು.

Exit mobile version