Home ಅಪರಾಧ ನಿವೃತ್ತಿ ದಿನವೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

ನಿವೃತ್ತಿ ದಿನವೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

0

ಶಿವಮೊಗ್ಗ: ಒಂದು ಲಕ್ಷ ರೂ. ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಇಲ್ಲಿಯ ಸ್ಮಾರ್ಟ್‌ಸಿಟಿ ಯೋಜನೆಯ ಪ್ರಭಾರ ಚೀಫ್ ಇಂಜಿನಿಯರ್ ಕೃಷ್ಣಪ್ಪ ಎಂಬುವವರು ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತರಿಗೆ ಬುಧವಾರವೇ ಅವರು ಅಧಿಕಾರ ಹಸ್ತಾಂತರಿಸಿ ನಿವೃತ್ತಿ ಪಡೆಯಬೇಕಿತ್ತು. 11 ಲಕ್ಷ ಮೊತ್ತದ ಬಿಲ್ ಪಾವತಿಗೆ ಕೃಷ್ಣಪ್ಪ ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬುಧವಾರ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಎಕ್ಸ್ಟ್ರೀಮ್ ಮೀಡಿಯಾ ಸಂಸ್ಥೆಯ ಎಕ್ಸಿಕ್ಯೂಟಿವ್ ಸೈಟ್ ಇಂಜಿನಿಯರ್ ಪವನ್ ಅವರಿಂದ ಸ್ಮಾರ್ಟ್ ಸಿಟಿಯ ಪ್ರಭಾರ ಚೀಫ್ ಇಂಜಿನಿಯರ್ ಕೃಷ್ಣಪ್ಪ ಅವರು ಒಂದು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಟ್ರ್ಯಾಪ್ ಮಾಡಲಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.
ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆ ವತಿಯಿಂದ 7 ಡಿಜಿಟಲ್ ಡಿಸ್ಪ್ಲೇ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಎಕ್ಸ್ಟ್ರೀಮ್ ಮೀಡಿಯಾ ಸಂಸ್ಥೆಯೆ ಇದರ ನಿರ್ವಹಣೆ ಮಾಡುತ್ತಿದೆ. ಕಳೆದ ಎರಡು ತ್ರೈಮಾಸಿಕದ ೧೧.೧೬ ಲಕ್ಷ ರೂ. ಮೊತ್ತದ ಬಿಲ್ ಬಾಕಿ ಇತ್ತು. ಇದನ್ನು ಮಂಜೂರು ಮಾಡಲು ಪ್ರಭಾರ ಚೀಫ್ ಇಂಜಿನಿಯರ್ ಕೃಷ್ಣಪ್ಪ ಒಂದು ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಸೈಟ್ ಇಂಜಿನಿಯರ್ ಪವನ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು
ಬುಧವಾರ ಇಲ್ಲಿನ ನೆಹರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಯೋಜನೆ ಕಚೇರಿ ಮುಂಭಾಗದ ಆವರಣದಲ್ಲಿ ಒಂದು ಲಕ್ಷ ರೂ. ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಭಾರ ಚೀಫ್ ಇಂಜಿನಿ ಯರ್ ಕೃಷ್ಣಪ್ಪ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version