ದಾವಣಗೆರೆ: ನಾನು ಸಿಎಂ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಆಕಾಂಕ್ಷಿ ಎಂದು ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ರಾಜ್ಯವನ್ನು ಲೂಟಿ ಮಾಡಿಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಯಾರನ್ನೋ ಸೋಲಿಸಲು ಪ್ರಯತ್ನ ಮಾಡಿಲ್ಲ. ಹೀಗಾಗಿ ನಾನು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಿಎಂ ಆಕಾಂಕ್ಷಿ ಎಂದರು.
ದಾವಣಗೆರೆಯಲ್ಲಿ, ಬೀದರ್‌ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಯತ್ನಿಸಿದ್ದು ಯಾರು? ತುಮಕೂರಿನಲ್ಲಿ ಸೋಮಣ್ಣ ಅವರನ್ನು ಸೋಲಿಸಲು ಪ್ರಯತ್ನ ಪಟ್ಟಿದ್ದು ಯಾರು ಎಂಬುದನ್ನು ಅವರೇ ಹೇಳಿದ್ದಾರೆ ಎಂದು ಅವರು ಪರೋಕ್ಷವಾಗಿ ಬಿಎಸ್‌ವೈ ಕುಟುಂಬ ಮತ್ತು ಅವರ ಹಿಂಬಾಲಕರನ್ನು ಕುಟುಕಿದರು.
ನಾನು ಎಂದೂ ನಾನೇ ಹಿಂದೂ ನಾಯಕ ಎಂದು ಹೇಳಿಕೊಂಡಿಲ್ಲ. ಯಾವೋ ಕೆಲವು ಬೆವರ್ಸಿಗಳು ಹಾಗೆ ಹೇಳಿಕೊಳ್ಳುತ್ತವೆ ಎಂದು ಗುಡುಗಿದರು.