ನವಜಾತ ಶಿಶು ಮೃತದೇಹ ಪತ್ತೆ

ಬೆಳಗಾವಿ: ನವಜಾತ ಹಸುಗೂಸೊಂದು ನಾಯಿ ಹಾಗೂ ಹಂದಿ ದಾಳಿಗೆ ಬಲಿಯಾದ ಘಟನೆ ನಡೆದಿದೆ.
ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದ ಮರಿಯಮ್ಮನ ಗುಡಿ ಓಣಿಯ ಬಳಿ ಈ ಘಟನೆ ನಡೆದಿದೆ. ಅಂಬಡಗಟ್ಟಿ ಗ್ರಾಮದ ಮೇಟಿ ಅವರ ಮನೆಯ ಹಿತ್ತಲಲ್ಲಿ ಪತ್ತೆಯಾದ ಹಸುಗೂಸು, ನಾಯಿ ಹಾಗೂ ಹಂದಿ ದಾಳಿಗೆ ಬಲಿಯಾಗಿದೆ, ಘಟನೆಯ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.