ನಟ ಅನಿಲ್ ಕಪೂರ್ ತಾಯಿ ನಿರ್ಮಲ್ ಕಪೂರ್ ನಿಧನ

0
29

ಮುಂಬೈ: ಬಾಲಿವುಡ್‌ ನಟ ಅನಿಲ್ ಕಪೂರ್, ಸಂಜಯ್ ಕಪೂರ್ ಮತ್ತು ಬೋನಿ ಕಪೂರ್ ಅವರ ತಾಯಿ ನಿರ್ಮಲ್ ಕಪೂರ್ ಅವರು ಶುಕ್ರವಾರ ಸಂಜೆ ನಿಧನರಾಗಿದ್ದು,
ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ನಿರ್ಮಲ್ ಕಪೂರ್, ದಿವಂಗತ ಚಲನಚಿತ್ರ ನಿರ್ಮಾಪಕ ಸುರಿಂದರ್ ಕಪೂರ್ ಅವರ ಪತ್ನಿಯಾಗಿದ್ದರು.ಅವರು ಚಲನಚಿತ್ರ ಉದ್ಯಮದ ಖ್ಯಾತನಾಮರಾದ ಬೋನಿ ಕಪೂರ್, ಅನಿಲ್ ಕಪೂರ್, ಸಂಜಯ್ ಕಪೂರ್ ಮತ್ತು ರೀನಾ ಕಪೂರ್ ಮರ್ವಾ ಎಂಬ ನಾಲ್ವರು ಮಕ್ಕಳಿಗೆ ತಾಯಿಯಾಗಿದ್ದಾರೆ. ಇದಲ್ಲದೆ, ಅವರು ಅರ್ಜುನ್ ಕಪೂರ್, ಸೋನಂ ಕಪೂರ್, ರಿಯಾ ಕಪೂರ್, ಹರ್ಷವರ್ಧನ್ ಕಪೂರ್, ಜಾಹ್ನವಿ ಕಪೂರ್, ಅಂಶುಲಾ ಕಪೂರ್, ಖುಷಿ ಕಪೂರ್ ಮತ್ತು ಮೋಹಿತ್ ಮರ್ವಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳಿಗೆ ಅಜ್ಜಿಯಾಗಿದ್ದರು. ಅವರ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಅವರ ಕುಟುಂಬ ಸದಸ್ಯರು ಅಂತಿಮ ನಮನ ಸಲ್ಲಿಸಲು ಆಗಮಿಸುತ್ತಿರುವುದು ಕಂಡುಬಂದಿದೆ.

Previous articleಯುವತಿಯ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಂಡು 14.48 ಲಕ್ಷ ಕಳೆದುಕೊಂಡ ಉದ್ಯಮಿ
Next articleಈಜಲು ಹೋದ ಮೂವರು ಬಾಲಕರು ಕೃಷಿ ಹೊಂಡದಲ್ಲಿ ಮುಳುಗಿ ಮೃತ