ಹುಬ್ಬಳ್ಳಿ: ಅಧಿಕಾರಿಗಳ ಸೋಗಿನಲ್ಲಿ ದುರ್ಗದ ಬೈಲ್ ಪ್ರದೇಶದಲ್ಲಿನ ಅಂಗಡಿಗಳ ಮೇಲೆ ದಾಳಿ ನಡೆಸಿ ವ್ಯಾಪಾರಸ್ಥರಿಗೆ ವಂಚಿಸುತ್ತಿದ್ದ ಇಬ್ಬರನ್ನು ಮಂಗಳವಾರ ಘಂಟಿಕೇರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಲಕ್ಷ್ಮಣ ರೋಖಾ ಹಾಗೂ ಮಂಜುನಾಥ ಚೌವ್ಹಾಣ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಇವರಿಬ್ಬರು ದುರ್ಗದ ಬೈಲ್‌ನಲ್ಲಿ ವಿವಿಧ ಅಂಗಡಿಗಳಿಗೆ ಅಧಿಕಾರಿ ಸೋಗಿನಲ್ಲಿ ಭೇಟಿ ನೀಡಿ ಹಗಲು ದರೋಡೆಗೆ ಇಳಿದಿದ್ದರು. ಕೊನೆಗೂ ಎಚ್ವೆತ್ತ ಅಂಗಡಿವೊಂದರ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇವರಿಬ್ಬರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.