ದೊಡ್ಡ ಹೆಸರು ಮಾಡಿ ಹುಟ್ಟೂರು ಮರೆತರು ಹುಟ್ಟು ಭಾಷೆ  ಮರೆಯಬಾರದು

ದಾವಣಗೆರೆ: ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡಿಗೆ ಹೋಗಿ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಬಹುಭಾಷಾ ನಟ ಕಮಲ್ ಹಾಸನ್ ನೀಡಿದ ಹೇಳಿಕೆಯನ್ನು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ ಖಂಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿ ಹುಟ್ಟೂರು ಮರೆತರು ಹುಟ್ಟು ಭಾಷೆ  ಮರೆಯಬಾರದು. ಆದರೆ ನಟ ಕಮಲ್ ಹಾಸನ್ ಈ ರೀತಿ ಹೇಳಿಕೆ ನೀಡುವುದು ವಿಪರ್ಯಾಸವಾಗಿದೆ ಎಂದರು.

ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿಕೆ ನೀಡಿ ಕನ್ನಡಿಗರ ಮನಸ್ಸಿನ ಮೇಲೆ ಘಾಸಿ ಮಾಡಿರುವ ನಟ ಕಮಲ್ ಹಾಸನ್ ಅವರು, ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಬೇಕು. ನಟ ಶಿವರಾಜ್ ಕುಮಾರ್ ಹಾಗೂ ನಟಿ ರಮ್ಯಾ ಸಮರ್ಥನೆ ವಿಚಾರ, ಇದು ಅವರ ವೈಯಕ್ತಿಕ ಸಂಬಂಧ ಇರಬಹುದು. ಆದರೆ ಕಮಲ್ ಹಾಸನ್ ಕನ್ನಡ ಬಗ್ಗೆ ನೀಡಿದ ಹೇಳಿಕೆಯನ್ನು ಇವರಿಬ್ಬರು ವಿಷಾದ ವ್ಯಕ್ತಪಡಿಸಬೇಕು ಎಂದು ಹೇಳಿದರು.

ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕೇಸ್ ವಾಪಸ್ ಪಡೆಯುವ ವಿಚಾರ, ಇದು ಸಂವಿಧಾನಕ್ಕೆ ವಿರುದ್ಧವಾದದ್ದು, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು. ಇಂತಹ ಕೇಸ್ ವಾಪಸ್ ಪಡೆಯುವುದು ಕಾನೂನು ವಿರುದ್ಧವಾದದ್ದು ಎಂದು ಹೇಳಿದರು.

ಮಂಗಳೂರು ಕೋಮು ಗಲಭೆ ವಿಚಾರ: ರಾಜಕೀಯ ಅಂದ್ರೆ ಅಧಿಕಾರಕ್ಕೆ ಬರಬೇಕು.  ಅಧಿಕಾರ ಬರಬೇಕಾದರೆ ಸಮಾಜ ವಿಭಜನೆ ಮಾಡಿ ಅಧಿಕಾರಕ್ಕೆ ಬರೋ ಪ್ರಯತ್ನ ಮಾಡಬೇಕು. ಆದ  ಕಾರಣಕ್ಕೆ ಇಂತಹ ಘಟನೆ ನಡೆಯುತ್ತಿವೆ ಎಂದು ಪತ್ರಕರ್ತರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸುವ ಮೂಲಕ ಸಂತೋಷ್ ಹೆಗಡೆ ಅವರು ವಿಷಾದ ವ್ಯಕ್ತಪಡಿಸಿದರು.