Home ತಾಜಾ ಸುದ್ದಿ ದಾಖಲೆ ಇಲ್ಲದ 6.87 ಲಕ್ಷ ರೂ ವಶಕ್ಕೆ

ದಾಖಲೆ ಇಲ್ಲದ 6.87 ಲಕ್ಷ ರೂ ವಶಕ್ಕೆ

0

ಕುಳಗೇರಿ ಕ್ರಾಸ್: ಲೋಕಸಭಾ ಚುನಾವಣೆ ಹಿನ್ನೆಲೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಚಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ಒಟ್ಟು ೬,೮೭,೦೦೦ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾಧಿಕಾರಿ ಡಾ.ದುರ್ಗೆಶ ತಿಳಿಸಿದ್ದಾರೆ.
ಚಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸಿದ ವೇಳೆ ಸರಿಯಾದ ದಾಖಲೆ ಇಲ್ಲದ ೬,೮೭,೦೦೦ ರೂ. ಹಣ ಪತ್ತೆಯಾಗಿದೆ. ಸರಿಯಾದ ದಾಖಲೆ ನೀಡದ ಕಾರಣ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಾದಾಮಿ ಪಿಎಸ್‌ಐ ವಿಠಲ್ ನಾಯಕ್, ಕೆರೂರ ಪಿಎಸ್‌ಐ ಆನಂದ ಆದಗೊಂಡ ಸೇರಿದಂತೆ ಚುನಾವಣಾ ಹಾಗೂ ಪೊಲೀಸ್ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

Exit mobile version