ದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮೀ

0
20

ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿರುವ ಕೊಲೆ ಆರೋಪಿ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮೀ ಆಗಮಿಸಿ ಭೇಟಿಯಾದರು.
ಸಂಜೆ ೪ಗಂಟೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಕೀಲರ ಜತೆಗೂಡಿ ಜೈಲಿಗೆ ಆಗಮಿಸಿದರು. ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಪೊಲೀಸ್ ಅಧಿಕಾರಿಗಳ ಜತೆ ಭೇಟಿಗೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡರು. ಜೈಲು ನೀತಿ ನಿಯಮಗಳನ್ನು ಪರಿಶೀಲಿಸಿ ವಿಜಯಲಕ್ಷ್ಮೀ ಅವರಿಗೆ ಪತಿ ದರ್ಶನ್ ಭೇಟಿಗೆ ಅವಕಾಶ ನೀಡಲಾಯಿತು. ವಿಶೇಷ ಭದ್ರತಾ ಸೆಲ್‌ನಲ್ಲಿದ್ದ ದರ್ಶನ್‌ನನ್ನು ಪೊಲೀಸರು ಸ್ವತಃ ತೆರಳಿ ಜೈಲು ವಿಸಿಟರ್ಸ್ ಆವರಣಕ್ಕೆ ಕರೆ ತಂದರು. ದರ್ಶನ್ ಅವರನ್ನು ಹೊರಗಡೆ ತಂದ ಬಳಿಕ ಪತ್ನಿ ಮತ್ತು ಲಾಯರ್ ಜತೆ ಮಾತುಕತೆ ನಡೆಸಲು ಅವಕಾಶ ನೀಡಲಾಯಿತು.

Previous articleಹುಲಿ ದತ್ತು ಪಡೆದ ಸಂಯುಕ್ತಾ ಹೊರನಾಡು
Next articleಕಾಂಗ್ರೆಸ್‌ನವರು ಮುಡಾ ಚಲೋ ನಡೆಸಲಿ