ದನಗಳ್ಳರ ಮೇಲೆ ಗುಂಡಿಕ್ಕಿದರೆ ಗೋ ವಧೆ ನಿಲ್ಲಲಿದೆ

0
60

ಮಂಗಳೂರು: ಸಚಿವ ಮಾಂಕಾಳ್ ವೈದ್ಯ ಹೇಳಿದಂತೆ ದನಗಳ್ಳರ ಮೇಲೆ ಗುಂಡಿಕ್ಕಿ ಕ್ರಮ ಕೈಗೊಂಡರೆ ಗೋ ವಧೆ ನಿಲ್ಲಲಿದೆ. ದರೋಡೆಕೋರರ ಮೇಲೆ ಫೈರಿಂಗ್ ಮಾಡುವ ಪೊಲೀಸರು ಅಕ್ರಮ ಗೋ ಸಾಗಾಟಗಾರರ ವಿರುದ್ಧವೂ ಇಂತಹ ಕ್ರಮ ಕೈಗೊಳ್ಳಲಿ ಎಂದು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.
ಕುದ್ರೋಳಿಯಲ್ಲಿ ಅಕ್ರಮ ಕಸಾಯಿಖಾನೆಗೆ ಶುಕ್ರವಾರ ಮೇಯರ್ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿ ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಗರ ಪ್ರದೇಶದಲ್ಲಿಯೇ ಗೋವುಗಳನ್ನು ವಧೆ ಮಾಡಲಾಗುತ್ತಿದೆ. ಇಲ್ಲಿನ ಅಳಕೆಯಲ್ಲಿ ಅಕ್ರಮ ಗೋ ವಧೆ ಕೇಂದ್ರವನ್ನು ಮೇಯರ್ ಮನೋಜ್ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದರು.
ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಬಿಜೆಪಿ ಸರ್ಕಾರ ಆಸ್ತಿ ಮುಟ್ಟುಗೊಲು ಕ್ರಮ ಜಾರಿಗೆ ತಂದಿತ್ತು. ಅಕ್ರಮ ಗೋ ವಧೆ ಮಾಡುವವರ ವಿರುದ್ಧ ಕ್ರಮ ಕೈಗೊಂಡಿತ್ತು. ಈಗ ಕಾಂಗ್ರೆಸ್ ಆಡಳಿತದಲ್ಲಿ ಮತ್ತೆ ಅಕ್ರಮ ಕಸಾಯಿಖಾನೆಗಳು ತಲೆ ಎತ್ತಿವೆ. ಜಿಲ್ಲೆಯಲ್ಲಿ ಗೋ ಕಳ್ಳತನ ಹೆಚ್ಚುತ್ತಿದೆ. ಅಕ್ರಮ ಕಸಾಯಿಖಾನೆ ಮಟ್ಟಹಾಕಬೇಕು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದರು.
ಅಕ್ರಮ ಕಸಾಯಿಖಾನೆ ನಡೆಯುವ ಸ್ಥಳ ಮುಟ್ಟಗೋಲು ಹಾಕಿಕೊಳ್ಳಬೇಕು. ಪೊಲೀಸರು ಕ್ರಮ ಕೈಗಳ್ಳದಿದ್ದರೆ ಬಿಜೆಪಿ ಕಾರ್ಯಕರ್ತರು ಮತ್ತು ಸಂಘಟನೆಗಳು ಅಕ್ರಮ ಕಸಾಯಿಖಾನೆ ನಡೆಯುವ ಸ್ಥಳಕ್ಕೆ ನುಗ್ಗಲಿದ್ದಾರೆ ಎಂದರು.

Previous articleಫ್ಯಾನ್ ದುರಸ್ತಿ ಮಾಡುತ್ತಿದ್ದಾಗ ಕರೆಂಟ್ ಪ್ರವಹಿಸಿ ಸಾವು
Next articleದೆಹಲಿ ಗೆಲುವು: ಬಿಜೆಪಿ ವಿಜಯೋತ್ಸವ