ತೆವಲಿಗಾಗಿ ಮಾತನಾಡುವುದನ್ನು ಬಿಡಿ

0
23

ಹುಬ್ಬಳ್ಳಿ: ಮೋದಿ, ಪ್ರಧಾನ ಮಂತ್ರಿ ಅಲ್ಲ. ಪ್ರಚಾರ ಮಂತ್ರಿ' ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ. ರಾಜಕೀಯ ತೆವಲಿಗೋಸ್ಕರ ಪ್ರಧಾನಿ ಮೋದಿ ವಿರುದ್ಧ ಮಾತನಾಡುವುದನ್ನು ಬಿಡಬೇಕು ಎಂದು ಕಿಡಿಕಾರಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಅವರು ರಾಷ್ಟ್ರೀಯ ಅಧ್ಯಕ್ಷರಾಗಲು ಏನೆಲ್ಲ ಮಾಡಿದ್ದಾರೆ ಎಂದು ತಿಳಿದುಕೊಳ್ಳಿ’ ಎಂದರು.
ಕಾಂಗ್ರೆಸ್ ಯಾವಾಗಲೆಲ್ಲ ರಾಹುಲ್ ಗಾಂಧಿ ಅವರನ್ನು ಲಾಂಚ್ ಮಾಡಿದ್ದಾರೋ ಆಗೆಲ್ಲ ನಮಗೆ ಹೆಚ್ಚಿನ ಬೆಂಬಲ ಸಿಕ್ಕಿದೆ. ರಾಹುಲ್ ಗಾಂಧಿ ಎಂಬ ಪ್ರಾಡಕ್ಟ್ ಸರಿಯಿಲ್ಲ. ಹೀಗಾಗಿ, ಅವರು ಅಧಿಕಾರಕ್ಕೆ ಬರುವುದೇ ಇಲ್ಲ. ಕಳೆದ ಬಾರಿ ೩೦೩ ಸ್ಥಾನಗಳನ್ನು ಪಡೆದಿದ್ದೆವು. ಈ ಬಾರಿ ೩೭೫ ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Previous articleಕಾಗೇರಿ ನಾಮಪತ್ರ ಸಲ್ಲಿಕೆ
Next article15ರಂದು ಜೋಶಿ ನಾಮಪತ್ರ ಸಲ್ಲಿಕೆ