ತಾಯಂದಿರ ದಿನ: ವಿಶೇಷ ಉಡುಗರೆ ಸ್ವೀಕರಿಸಿದ ಮೋದಿ

0
24

ಪಾಶ್ಚಿಮಾತ್ಯ ಜಗತ್ತು ಇಂದು ತಾಯಂದಿರ ದಿನವನ್ನು ಆಚರಿಸುತ್ತದೆ ಆದರೆ ನಾವು ಭಾರತದಲ್ಲಿ ತಾಯಿ, ಕಾಳಿ ದೇವತೆ, ದುರ್ಗಾ ದೇವತೆ ಮತ್ತು ತಾಯಿ ಭಾರತಕ್ಕಾಗಿ ವರ್ಷವಿಡೀ ಪ್ರಾರ್ಥಿಸುತ್ತೇವೆ

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದಿವಂಗತ ತಾಯಿ ಹೀರಾಬೆನ್ ಪಟೇಲ್ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ.
ಇಬ್ಬರು ಯುವಕರು ಚಿತ್ರಗಳನ್ನು ಬಿಡಿಸಿ ಸಭೆಯಲ್ಲಿ ಚಿತ್ರಗಳನ್ನು ಎತ್ತಿ ಹಿಡಿದು ಪ್ರದರ್ಶನ ಮಾಡುವದನ್ನು ಕಂಡ ಮೋದಿ ಅವರು ತಮ್ಮ ಭಾಷಣ ಮೊಟಕುಗೊಳಿಸಿ ಯುವಕರಿಗೆ ಭಾವ ಚಿತ್ರದ ಹಿಂದೆ ತಮ್ಮ ವಿಳಾಸ ಬರೆದು ನೀಡುವಂತೆ ಹೇಳಿದ್ದಾರೆ ಮತ್ತು ಉಡುಗೊರೆಗಾಗಿ ಅವರಿಗೆ ಧನ್ಯವಾದ ಹೇಳಿದರು, ತಮ್ಮ ಮಾತನ್ನು ಮುಂದುವರೆಸಿ ಪಾಶ್ಚಿಮಾತ್ಯ ಜಗತ್ತು ಇಂದು ತಾಯಂದಿರ ದಿನವನ್ನು ಆಚರಿಸುತ್ತದೆ ಆದರೆ ನಾವು ಭಾರತದಲ್ಲಿ ತಾಯಿ, ಕಾಳಿ ದೇವತೆ, ದುರ್ಗಾ ದೇವತೆ ಮತ್ತು ತಾಯಿ ಭಾರತಕ್ಕಾಗಿ ವರ್ಷವಿಡೀ ಪ್ರಾರ್ಥಿಸುತ್ತೇವೆ ಎಂದು ಹೇಳಿದರು.

Previous article10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್‌
Next articleಗುಡುಗು ಸಹಿತ ಭಾರೀ ಮಳೆ