ತನಿಖೆ ನಡೆಸಲು ಸೆಬಿ ಸಮರ್ಥವಾಗಿದೆ

0
13

ಅದಾನಿ ಗ್ರೂಪ್‌ನ ತನಿಖೆಗೆ ಸಂಬಂಧಿಸಿದ ಹಲವಾರು ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಏಕಕಾಲದಲ್ಲಿ ತೀರ್ಪು ನೀಡಲಾಯಿತು. ಅದಾನಿ ಗ್ರೂಪ್ ವಿರುದ್ಧ ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳ ಕುರಿತು ಸೆಬಿ ನಡೆಸುತ್ತಿರುವ ತನಿಖೆಯನ್ನು ಎಸ್‌ಐಟಿ ಅಥವಾ ಇನ್ನಾವುದೇ ತನಿಖಾ ಸಂಸ್ಥೆಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಯಾವುದೇ ಕಾನೂನು ಉಲ್ಲಂಘನೆಯಾಗಿದ್ದರೆ, ಸರ್ಕಾರ ಮತ್ತು ಸೆಬಿ ಅದನ್ನು ಪರಿಶೀಲಿಸುತ್ತದೆ ಮತ್ತು ಕಾನೂನು ಕ್ರಮ ಕೈಗೊಳ್ಳುತ್ತದೆ, SEBI ಕಾರ್ಯವೈಖರಿತಿಯಲ್ಲಿ ಯಾವುದೇ ರೀತಿಯ ಲೋಪ ಇಲ್ಲ ಎನ್ನುವುದನ್ನು ನ್ಯಾಯಾಲಯ ಹೇಳಿದೆ. ಸೆಬಿ ಮೂರು ತಿಂಗಳೊಳಗೆ ತನ್ನ ತನಿಖೆಯನ್ನು ಮುಗಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ.

Previous articleಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ
Next articleಎಪಿಎಂಸಿ ಕಾಯ್ದೆ ಶೀಘ್ರ ಜಾರಿ