Home ಅಪರಾಧ ಡೆಂಗ್ಯೂ: ಐದು ವರ್ಷದ ಬಾಲಕ ಬಲಿ

ಡೆಂಗ್ಯೂ: ಐದು ವರ್ಷದ ಬಾಲಕ ಬಲಿ

0

ಬಳ್ಳಾರಿ: ಡೆಂಗ್ಯೂ ಜ್ವರದಿಂದಾಗಿ ಐದು ವರ್ಷದ ಮಗುವೊಂದು ಮೃತಪಟ್ಟ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿಯಲ್ಲಿ ನಡೆದಿದೆ. ಸಿದ್ದಮ್ಮನಹಳ್ಳಿಯ ಪ್ರದೀಪ ಆಚಾರಿ(5) ಡೆಂಗ್ಯೂನಿಂದ ಮೃತಪಟ್ಟಿರುವ ಬಾಲಕ ಎಂದು ಹೇಳಲಾಗಿದೆ. ಒಂದು ವಾರದ ಅವಧಿಯಲ್ಲಿ ಸಿದ್ದಮ್ಮನಹಳ್ಳಿಯಲ್ಲಿ 20ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು, ಡೆಂಗ್ಯೂ ಸೋಂಕಿತರು ಪ್ರತನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.
ಗ್ರಾಮದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಪ್ರಕರಣಗಳಿಂದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಫಾಗಿಂಗ್ ಮಾಡದ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version