Home ತಾಜಾ ಸುದ್ದಿ ಭಾಷಣದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸ್ವಸ್ಥ

ಭಾಷಣದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸ್ವಸ್ಥ

0

ಶ್ರೀನಗರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡುವಾಗಲೇ ದಿಢೀರ್ ಅಸ್ವಸ್ಥರಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ನಡೆದಿದೆ.
ಚುನಾವಣಾ ಪ್ರಚಾರದ ಭಾಷಣದ ವೇಳೆ ಅವರ ಧ್ವನಿಯು ತೀವ್ರವಾಗಿ ಕಟ್ಟಿಕೊಂಡಿದ್ದು, ಈ ವೇಳೆ ಅವರು ಮಾತನಾಡಲು ಆಗದಷ್ಟು ಆಯಾಸ ಅನುಭವಿಸಿದರು. ಕೂಡಲೇ ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕರು ಹಾಗೂ ಖರ್ಗೆ ಅವರ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಬಂದಿದ್ದು, ಕುಡಿಯಲು ನೀರು ಕೊಟ್ಟರು. ಬಳಿಕ ಖರ್ಗೆ ಅವರ ಕೈ ಹಿಡಿದು ಕೂರಿಸಿದ್ದಾರೆ.

Exit mobile version