ಡಿಡಿಪಿಐ ಕಚೇರಿಯಲ್ಲಿ ವಿದ್ಯುತ್ ಶಾಟ್೯ ಸರ್ಕ್ಯೂಟ್: ಕಡತ, ಕಂಪ್ಯೂಟರ್ ಭಸ್ಮ

ದಾವಣಗೆರೆ: ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ,
(ಡಿಡಿಪಿಐ) ಕಚೇರಿಗೆ ಬುಧವಾರ ರಾತ್ರಿ ಬೆಂಕಿ ಬಿದ್ದಿದ್ದು, ಕಡತ ಹಾಗೂ ಕಂಪ್ಯೂಟರ್‌ ಭಸ್ಮವಾಗಿವೆ.
ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಷಟರ್ಸ್‌ನಿಂದ ಹೊರಬರುತ್ತಿದ್ದ ಹೊಗೆಯನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬಾಗಿಲು ಮುರಿದು ಬೆಂಕಿ ನಂದಿಸಿದ್ದಾರೆ.
‘ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಉಂಟಾಗಿ ಕಚೇರಿಗೆ ಹಾನಿಯಾಗಿದೆ. ಕಡತ, ಕಂಪ್ಯೂಟರ್‌ ಹಾಗೂ ಪ್ರಿಂಟರ್‌ ಸುಟ್ಟಿವೆ’ ಎಂದು ಡಿಡಿಪಿಪಿ ಜಿ.ಕೊಟ್ರೇಶ್‌ ಮಾಹಿತಿ ನೀಡಿದ್ದಾರೆ.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾ ಅಧಿಕಾರಿ ಪ್ರೇಮಾನಂದ ಶೇಟ್, ಸಿಬ್ಬಂದಿಗಳಾದ ಮಹಾಲಿಂಗ ಪಾಟೀಲ, ನಾಗರಾಜ್ ಟಿ.ಸಿ, ಮುನಿಸ್ವಾಮಿ ನಾಯಕ, ಸತೀಶ್ ಪಾಲ್ಗೊಂಡಿದ್ದರು.