ಟ್ಯ್ರಾಕ್ಟರಗೆ ಕಾರು ಢಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

0
30

ಬಾಗಲಕೋಟೆ: ನಿಂತಿದ್ದ ಕಬ್ಬು ತುಂಬಿದ‌ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಜಿಲ್ಲೆ ತುಂಬರಮಟ್ಟಿ ಕ್ರಾಸ್ ಬಳಿ‌ ಜರುಗಿದೆ.

ಹುಬ್ಬಳ್ಳಿ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ೨೧೮ರಲ್ಲಿ ಘಟನೆ ಸಂಭವಿಸಿದೆ. ಮೃತಪಟ್ಟವರು ವಿಜಯಪುರ ಜಿಲ್ಲೆಯ ಮಲ್ಲು ಪೂಜಾರಿ(24), ಕಲ್ಲಪ್ಪ ಕೌಟಗಿ(34), ಕಾಮಾಕ್ಷಿ ಬಡಿಗೇರ(35), ತುಕಾರಾಮ ತಳೇವಾಡ(30) ಎಂದು ತಿಳಿದು ಬಂದಿದೆ.

ಇವರೆಲ್ಲ ಬಾದಾಮಿಯಿಂದ ಹೊನಗನಹಳ್ಳಿಗೆ ತೆರಳುತ್ತಿದ್ದರು, ಸ್ಥಳಕ್ಕೆ ಎಸ್ಪಿ ವೈ ಅಮರನಾಥ ರೆಡ್ಡಿ ಭೇಟಿ‌ ನೀಡಿದ್ದಾರೆ.

ಶವಗಳನ್ನು ಬೀಳಗಿ ತಾಲೂಕಾಸ್ಪತ್ರೆಯಲ್ಲಿ ಶವಪರೀಕ್ಷೆಗೆ‌ ಕಳುಹಿಸಲಾಗಿದೆ.

Previous articleರಾಜ್ಯದ ನಾಲ್ವರು ಸೇರಿ 132 ಸಾಧಕರಿಗೆ ಪದ್ಮ ಗೌರವ
Next articleಶೆಟ್ಟರ್ ಸ್ಪರ್ಧೆ ವರಿಷ್ಠರ ತೀರ್ಮಾನ