ಜಾತಿ ಜನಗಣತಿ ವಿಧಾನಸಭೆ ವಿಶೇಷ ಅಧಿವೇಶನ ಕರೆಯಿರಿ

0
23

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಸಂಪುಟ ಸದಸ್ಯರು ವಿಧಾನಮಂಡಲದ ಉಭಯ ಸದನಗಳಲ್ಲಿ ಕತ್ತಲಲ್ಲಿ ಗುಂಡು ಹಾರಿಸಿ, ಆಂತರಿಕ ಕ್ಷೋಬೆ ನಿರ್ಮಿಸಿ ತಾತ್ಕಾಲಿಕ ರಾಜಕೀಯ ಬೇಳೆ ಬೇಯಿಸಿಕೊಂಡು ಕುರ್ಚಿ ಉಳಿಸಿಕೊಳ್ಳುವ ಷಡ್ಯಂತ್ರ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಜಾತಿ ಜನಗಣತಿಗೆ ಸಂಬಂಧಪಟ್ಟಂತೆ ವಿಧಾನಸಭೆ ವಿಶೇಷ ಅಧಿವೇಶನ ಕರೆಯಿರಿ. ಅಲ್ಲಿಯೇ ಚರ್ಚೆ ಮಾಡೋಣ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯ ವರದಿಯನ್ನು ನಿಮ್ಮ ಸಂಪುಟದ ಸದಸ್ಯರಿಗೆ ಒಪ್ಪಿಸಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಜನರನ್ನು ಹೇಗೆ ಒಪ್ಪಿಸುತ್ತೀರಿ ಎಂದು ಪ್ರಶ್ನಿಸಿದರು.
ಜಾತಿ ಜನಗಣತಿಯ ಸರ್ವೆ ಮಾಡಿದ್ದು ಯಾವಾಗ. ಸರ್ವೆಗೆ ಎಷ್ಟು ಜನ ಹೋಗಿದ್ದರು. ಸರ್ವೆ ನಡೆಸಿರುವುದಕ್ಕೆ ದಾಖಲೆ ಏನಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

Previous articleತಾಯಿ ಆಸೆಯಂತೆ ಕೆಂಬಾಲು ಗ್ರಾಮದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿದ ನಟ ಪ್ರಭುದೇವ
Next articleಜಾತಿ ಗಣತಿ: ಶೀಘ್ರದಲ್ಲೇ ವಿಶೇಷ ಅಧಿವೇಶನ