ಚಾಲಕನಿಗೆ ತಲೆಸುತ್ತು: ಜಮೀನಿಗೆ ಇಳಿದ ಬಸ್‌

0
12

ಗದಗ: ಬಸ್‌ ಚಾಲಕನಿಗೆ ತಲೆ ಸುತ್ತು ಬಂದಿದ್ದರ ಪರಿಣಾಮ, ಚಾಲಕನ ಸಮಯ ಪ್ರಜ್ಞೆಯಿಂದ ರಸ್ತೆಯಿಂದ ಜಮೀನ್‌ಗೆ ಇಳಿದಿದ್ದು, ಸಂಭವಿಸಬಹುದಾದ ದೊಡ್ಡ ಅವಘಡ ತಪ್ಪಿದೆ.
ಸುಮಾರು 40ಕ್ಕೂ ಹೆಚ್ಚು ಮಂದಿಯನ್ನ ಹೊಂದಿದ್ದ ಸಾರಿಗೆ ಸಂಸ್ಥೆಯ ಬಸ್‌ ಮುಂಡರಗಿ ಪಟ್ಟಣದಿಂದ ಹಮ್ಮಿಗಿ ಗ್ರಾಮಕ್ಕೆ ತೆರಳುತ್ತಿದ ವೇಳೆ ಈ ಘಟನೆ ನಡೆದಿದೆ. ಬಸ್‌ ಚಲಾಯಿಸುತ್ತಿದ್ದಾಗ ಚಾಲಕನಿಗೆ ತಲೆ ಸುತ್ತು ಬಂದಿದರಿಂದ, ನಿಯಂತ್ರಣ ತಪ್ಪಿದ ಬಸ್ ರಸ್ತೆಯಿಂದ ಜಮೀನಿಗೆ ಬಸ್‌ ನುಗ್ಗಿದೆ, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು. ಬಸ್‌ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleNEET ವಿವಾದ: ಸಿಬಿಐ ತನಿಖೆಗೆ ಒತ್ತಾಯ
Next articleಕೌಟುಂಬಿಕ ಕಲಹ: ಯೋಧನ ಪತ್ನಿ ಆತ್ಮಹತ್ಯೆ