ಗ್ಯಾರಂಟೀಗಳಿಗೆ ಗ್ಯಾರಂಟಿ ಇಲ್ಲ

0
16

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟೀಗಳಿಗೆ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕಾಂಗ್ರೆಸ್ 2023ರ ವಿಧಾನಸಭಾ ಚುನಾವಣಾ ಗ್ಯಾರಂಟಿ ಆಶ್ವಾಸನೆಗಳನ್ನೇ ಇನ್ನೂ ಪೂರೈಸಿಲ್ಲ, ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಹೊಸ ಬೆದರಿಕೆಯೊಂದಿಗೆ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡದೇ ಇದ್ದರೆ ಎಲ್ಲಾ ಗ್ಯಾರಂಟಿ ಭಾಗ್ಯಗಳನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೊಂಡಿರುವುದನ್ನ ಕೇಳಿದರೆ ಕಾಂಗ್ರೆಸ್ ಗ್ಯಾರಂಟೀಗಳಿಗೆ ಗ್ಯಾರಂಟಿ ಇಲ್ಲದಂತಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಕತ್ತರಿ ಹಾಕಿದ ಕಾಂಗ್ರೆಸ್, ತನ್ನ ಚುನಾವಣಾ ಗ್ಯಾರಂಟೀಗಳನ್ನೂ ಈಡೇರಿಸುತ್ತಿಲ್ಲ. ಖಂಡಿತವಾಗಿಯೂ ಮುಂದಿನ ಚುನಾವಣೆಯಲ್ಲಿ ಕೈ ಗೆ “ಕೈ” ಕೊಡಲಿದ್ದಾರೆ ಜನತೆ! ಎಂದು ಬರೆದುಕೊಂಡಿದ್ದಾರೆ.

Previous articleಆದಾಯ ಸಂಗ್ರಹದಲ್ಲಿ ಇತಿಹಾಸ ಬರೆದ ಮಂತ್ರಾಲಯದ ಶ್ರೀರಾಯರ ಮಠ
Next articleಸಂಯುಕ್ತ ಕರ್ನಾಟಕದ ಗುರುರಾಜ್ ಕುಲಕರ್ಣಿ, ರಾಧಾಕೃಷ್ಣ ಭಟ್, ಪಿ.ಕೆ.ಬಡಿಗೇರ ಸೇರಿದಂತೆ ಹಲವರಿಗೆ ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ