ಗಾಂಜಾ ಸಹಿತ ಐಐಟಿ ಬಾಬಾ ಬಂಧನ: ಜಾಮೀನಿನ ಮೇಲೆ ಬಿಡುಗಡೆ

0
38

ಜೈಪುರ: ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್ ಅವರನ್ನು ಜೈಪುರ ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿ, ವಿಡಿಯೊ ಆಧರಿಸಿ ಸ್ಥಳಕ್ಕೆ ಧಾವಿಸಿ ಸಿಂಗ್‌ನನ್ನು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆ ವೇಳೆ ಆತನ ಬಳಿ ಅಲ್ಪ ಪ್ರಮಾಣದ ಗಾಂಜಾ ಪತ್ತೆಯಾಗಿದ್ದು ಸಿಂಗ್ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ

Previous articleಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ಶಾಸಕ ಕಾಮತ್ ವಿರುದ್ಧ ಪ್ರಕರಣ
Next articleಯಾಳಗಿಯ ಸದ್ಗುರು ರಾಮಪ್ಪಯ್ಯ ಮಠದಲ್ಲಿ ಸಹಸ್ರ ಲಿಂಗಗಳ ಪ್ರತಿಷ್ಠಾಪನೆ