Home ನಮ್ಮ ಜಿಲ್ಲೆ ಕೊಪ್ಪಳ ಗವಿಶ್ರೀಗೆ ಡಾಲಿ ಧನಂಜಯ್ ಮದುವೆ ಆಮಂತ್ರಣ

ಗವಿಶ್ರೀಗೆ ಡಾಲಿ ಧನಂಜಯ್ ಮದುವೆ ಆಮಂತ್ರಣ

0

ಕೊಪ್ಪಳ: ನಗರದ ಗವಿಸಿದ್ಧೇಶ್ವರ ಮಠಕ್ಕೆ ಮಂಗಳವಾರ ಆಗಮಿಸಿ, ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಗೆ ನಟ ಡಾಲಿ ಧನಂಜಯ್ ಮದುವೆ ಆಮಂತ್ರಣ ನೀಡಿದರು.
ಅಭಿನವ ಗವಿಶ್ರೀಗಳು ಮತ್ತು ಡಾಲಿ ಧನಂಜಯ್ ಉಭಯ ಕುಶಲೋಪರಿ ವಿಚಾರಿಸಿಕೊಂಡರು. ಗವಿಶ್ರೀಗಳು ಮಠದ ಪರಂಪರೆ, ಇತಿಹಾಸ, ರಥೋತ್ಸವ, ಜಾತ್ರೋತ್ಸವದ ಬಗ್ಗೆ ಮಾಹಿತಿ ನೀಡಿದರು. ಕೆಲಹೊತ್ತು ವಿವಾಹದ ಕುರಿತು ಮಾತನಾಡಿದರು. ವಿವಿಧ ವಿಷಯಗಳ ಕುರಿತು ಪರಸ್ಪರರು ಚರ್ಚಿಸಿದರು. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಶ್ರೀಮಠದಿಂದ ಡಾಲಿ ಧನಂಜಯ್‌ಗೆ ಗವಿಸಿದ್ಧೇಶ್ವರರ ಕರ್ತೃ ಗದ್ದುಗೆಯ ಫೋಟೊ ನೀಡಿ, ಸನ್ಮಾನಿಸಿ, ಆಶೀರ್ವಾದಿಸಿದರು.
ನಗರದ ಗವಿಮಠ ಮೈದಾನದಲ್ಲಿನ ಮಹಾದಾಸೋಹ ಭವನದಲ್ಲಿ ಡಾಲಿ ಧನಂಜಯ್ ಪ್ರಸಾದ ಸ್ವೀಕರಿಸಿದರು. ಬಳಿಕ ಪ್ರಸಾದ ತಯಾರಿಕೆ, ಪ್ರಸಾದ ವಿತರಣೆ ವೀಕ್ಷಿಸಿದರು. ಡಾಲಿ ಧನಂಜಯ್ ಜತೆಗೆ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು.

Exit mobile version