Home ಸುದ್ದಿ ದೇಶ ಖರ್ಗೆ ನೇತೃತ್ವದಲ್ಲಿ ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ

ಖರ್ಗೆ ನೇತೃತ್ವದಲ್ಲಿ ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ

0

ಎಸ್​ಬಿಐ ಮತ್ತು ಎಲ್​ಐಸಿಯಲ್ಲಿರುವ ಬಹಳಷ್ಟು ಸಾರ್ವಜನಿಕರ ಹಣವು ಅದಾನಿ ಗ್ರೂಪ್​ಗಳಲ್ಲಿ ಹೂಡಿಕೆಯಾಗಿದೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೋಟ್ಯಂತರ ಜನರ ಹಣವು ಎಲ್​ಐಸಿ ಮತ್ತು ಎಸ್​ಬಿಐನಂತರ ಸಂಸ್ಥೆಗಳ ಮೂಲಕ ಕೆಲ ಆಯ್ದ ಕಂಪನಿಗಳಿಗೆ ಸಂದಾಯವಾಗಿದೆ. ಈ ಕಂಪನಿ (ಅದಾನಿ ಎಂಟರ್ಪ್ರೈಸಸ್) ಬಗ್ಗೆ ಹಿಂಡನ್ಬರ್ಗ್ ರೀಸರ್ಚ್ ವರದಿಯಲ್ಲಿ ಎತ್ತಿತೋರಿಸಲಾಗಿದೆ. ಅದಾದ ಬಳಿಕ ಆ ಕಂಪನಿಯ ಷೇರುಗಳು ಬಿದ್ದಿವೆ. ಈ ಕಂಪನಿಯ ಮಾಲೀಕ ಯಾರು ಎಂದು ನಿಮಗೆ ಗೊತ್ತು. ಇಂಥ ಕಂಪನಿಗಳಿಗೆ ಸರ್ಕಾರ ಯಾಕೆ ಹಣ ಕೊಡುತ್ತಿದೆ? ಎಲ್​ಐಸಿ, ಎಸ್​ಬಿಐ ಮೊದಲಾದ ಸಂಸ್ಥೆಗಳು ಈ ಕಂಪನಿಗೆ ಹಣ ಕೊಟ್ಟಿವೆ. ಇದರ ತನಿಖೆ ಆಗಬೇಕು. ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಆಗಬೇಕು ಅಥವಾ ಭಾರತೀಯ ಮುಖ್ಯ ನ್ಯಾಯಮೂರ್ತಿ ಮಾರ್ಗದರ್ಶನದಲ್ಲಿ ಸಮಿತಿ ರಚನೆಯಾಗಿ ಅದರಿಂದಲಾದರೂ ತನಿಖೆ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಖರ್ಗೆ ನೇತೃತ್ವದಲ್ಲಿ ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ

Exit mobile version