Home ತಾಜಾ ಸುದ್ದಿ ಅಪ್ಪಿಕೊಂಡು ಮುತ್ತಿಟ್ಟ ಲಾಡ್

ಅಪ್ಪಿಕೊಂಡು ಮುತ್ತಿಟ್ಟ ಲಾಡ್

0

ಬಳ್ಳಾರಿ: ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ಸಂತೋಷ ಲಾಡ್, ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಪರಸ್ಪರ ಅಪ್ಪಿಕೊಂಡ ಘಟನೆ ಸಂಡೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿ ನಡೆಯುತ್ತಿದ್ದ ಜಾತ್ರೆ ಮೆರವಣಿಗೆಯಲ್ಲಿ ಪಾಲ್ಗೊಂಡ ವೇಳೆ ಸಂತೋಷ್ ಲಾಡ್‌ ರಾಮುಲು ಅವರನ್ನು ತಬ್ಬಿಕೊಂಡು ಮುತ್ತಿಟ್ಟು ಕಿವಿಯಲ್ಲಿ ಏನೇನೋ ಪಿಸುಗುಟ್ಟಿದರು.
ರಾಜಕಾರಣದಲ್ಲಿ ಯಾವ ಘಳಿಗೆಯಲ್ಲಿ ಯಾರು ಬೇಕಾದರೂ ಶತ್ರುಗಳಾಗಿ ಬದಲಾಗಬಹುದು, ಮಿತ್ರರು ಆಗಬಹುದು ಎಂಬುದಕ್ಕೆ ನಿದರ್ಶನ ಸಿಕ್ಕಂತಾಗಿದೆ. ಮೆರವಣಿಗೆಯಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಪರಸ್ಪರ ಶಕ್ತಿ ಪ್ರದರ್ಶನದ ರೀತಿಯಲ್ಲಿ ಜಮಾವಣೆ ಆಗಿದ್ದರು. ಇಬ್ಬರು ನಾಯಕರು ಪರಸ್ಪರ ಅಪ್ಪಿಕೊಂಡಾಗ ಕಕ್ಕಾಬಿಕ್ಕಿ ಆದರು.

ಅಪ್ಪಿಕೊಂಡು ಮುತ್ತಿಟ್ಟ ಸಂತೋಷ್ ಲಾಡ್

Exit mobile version