Home ತಾಜಾ ಸುದ್ದಿ ಕ್ಯಾಂಟರ್‌ಗೆ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

ಕ್ಯಾಂಟರ್‌ಗೆ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

0
ಮುದ್ದೇಬಿಹಾಳ : ಮೃತ ದುರ್ದೈವಿಗಳು

ಮುದ್ದೇಬಿಹಾಳ: ದೇವರ ದರ್ಶನಕ್ಕೆಂದು ಹೋದವರು ಮನೆಗೆ ಮರಳಿ ಬಾರದೇ ಬಾರದ ಲೋಕಕ್ಕೆ ತೆರಳಿದ ಘಟನೆ ಹುನಗುಂದ ತಾಲೂಕಿನ ಧನ್ನೂರ ಗ್ರಾಮದ ಬಳಿ ನಡೆದಿದೆ.
ಮೃತ ದುರ್ದೈವಿಗಳನ್ನು ಮುದ್ದೇಬಿಹಾಳ ಪಟ್ಟಣದ ಮಹಾಂತೇಶ ನಗರದ ನಿವಾಸಿ ರಾಮಣ್ಣ ನಾಯಕಮಕ್ಕಳ(57), ತಾಲೂಕಿನ ಬಿದರಕುಂದಿ ಗ್ರಾಮದ ಲಕ್ಷ್ಮಣ ವಡ್ಡರ(55), ಬೈಲಪ್ಪ ಬಿರಾದಾರ(46), ಮತ್ತು ಗುಡ್ನಾಳ ಗ್ರಾಮದ ಮಹಮ್ಮದ ರಫೀಕ(23) ಎಂದು ಗುರುತಿಸಲಾಗಿದೆ.
ಮೃತರು ಹೊಸಪೇಟೆಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಕಾರಿನ ಮೂಲಕ ತೆರಳಿ ದೇವರ ದರ್ಶನ ಪಡೆದು ಮರಳುವಾಗ ಹುನಗುಂದ ತಾಲೂಕಿನ ಧನ್ನೂರ ಗ್ರಾಮದ ಟೋಲ್ ಬಳಿ ಮುದ್ದೇಬಿಹಾಳ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಗಂಭೀರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಾಹನಗಳೆರಡೂ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜಾಗಿದ್ದು, ಲಾರಿ ರಸ್ತೆ ಬಿಟ್ಟು ಪಕ್ಕದ ಜಮೀನೊಂದರಲ್ಲಿ ಬಿದ್ದಿದೆ. ಮಧ್ಯರಾತ್ರಿ 2:10 ಕ್ಕೆ ಧನ್ನೂರು ಬಳಿ ಇರುವ ಟೂಲ್ ನಿಂದ ಲಾರಿ ಹೊರಟಿತ್ತು ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಸಂಪೂರ್ಣ ವಿವರ ತನಿಖೆಯಿಂದ ಹೊರಬರಬೇಕಿದೆ. ಈ ಘಟನೆ ಬುಧವಾರ ಮಧ್ಯರಾತ್ರಿ ಸಂಭವಿಸಿದ್ದು ಹುನಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Exit mobile version