Home News ಪ್ರಕೃತಿಯ ಮಾತೃಸ್ವರೂಪ ತಿಮ್ಮಕ್ಕ

ಪ್ರಕೃತಿಯ ಮಾತೃಸ್ವರೂಪ ತಿಮ್ಮಕ್ಕ

ಬೆಂಗಳೂರು: ಪ್ರಕೃತಿಯ ಮಾತೃಸ್ವರೂಪ ತಿಮ್ಮಕ್ಕ ಅವರ ಅಸಾಧಾರಣ ಸಾಧನೆ ನಮಗೆಲ್ಲರಿಗೂ ಅಚ್ಚಳಿಯದ ಸ್ಫೂರ್ತಿಯಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಸಾಲುಮರದ ತಿಮ್ಮಕ್ಕನವರ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಪೋಸ್ಟ್‌ ಮಾಡಿದ್ದು ಸಾಲುಮರದ ತಿಮ್ಮಕ್ಕ ಅವರ 113ನೇ ಜನ್ಮದಿನದ ಅಂಗವಾಗಿ ಇಂದು ಅವರನ್ನು ಭೇಟಿಯಾಗಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿ, ಅವರಿಂದ ಆಶೀರ್ವಾದ ಪಡೆದೆನು. ಪ್ರಕೃತಿಯ ಮಾತೃಸ್ವರೂಪ ತಿಮ್ಮಕ್ಕ ಅವರ ಅಸಾಧಾರಣ ಸಾಧನೆ ನಮಗೆಲ್ಲರಿಗೂ ಅಚ್ಚಳಿಯದ ಸ್ಫೂರ್ತಿಯಾಗಿದೆ. ಅವರು ಮೂಡಿಸಿದ ಹಸಿರು ಹೆಜ್ಜೆಗಳು ಗಾಳಿಯ ಪ್ರತಿಯೊಂದು ಉಸಿರಿನಲ್ಲಿ ಮತ್ತು ಮರದ ಪ್ರತಿಯೊಂದು ಹಸಿರು ಚಿಗುರಿನಲ್ಲಿ ಜೀವಂತವಾಗಿವೆ. ಅವರ ದೀರ್ಘ ಆಯುಷ್ಯ ಮತ್ತು ಆರೋಗ್ಯ ವೃದ್ಧಿಯಾಗಲೆಂದು ಹಾರೈಸುತ್ತೇನೆ ಎಂದಿದ್ದಾರೆ. ಭಾರತ ಸರ್ಕಾರ ತಿಮ್ಮಕ್ಕನವರ ಪರಿಸರ ಕಾಳಜಿಗೆ ಪದ್ಮಶ್ರೀ ಪ್ರಶಸ್ತಿ ನೀಡಿಗೌವರಿಸಿದೆ. ಕರ್ನಾಟಕ ಸರ್ಕಾರವು ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ನೀಡಿ, ಅವರನ್ನು ಪರಿಸರ ರಾಯಭಾರಿಯಾಗಿ ನೇಮಕ ಮಾಡಿದೆ ಎಂದಿದ್ದಾರೆ.

Exit mobile version