‘ಕೈ’ ನೆರಳಿನಲ್ಲಿ ತನಿಖೆ

0
14

ಬೆಂಗಳೂರು: ‘ಕೈ’ ನೆರಳಿನಲ್ಲಿ ತನಿಖೆ ನಡೆಸುವ ಕೈಗಳಿಗೆ ಸ್ವತಂತ್ರ್ಯ ಇರುತ್ತದೆ ಎಂದು ನಿರೀಕ್ಷಿಸಲು ಹೇಗೆ ಸಾಧ್ಯ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ಕಾರ್ಯವೈಖರಿ ಹಾಗೂ ಅದರ ದಿಕ್ಕು ದೆಸೆಯನ್ನು ಈ ಮೊದಲೇ ಸೂಚಿಸುವಂತಿತ್ತು. ನಿರೀಕ್ಷೆಯಂತೆಯೇ ಮಾಜಿ ಸಚಿವ ಬಿ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಶಾಸಕ ದದ್ದಲ್ ಅವರ ಹೆಸರನ್ನು ಕೈಬಿಟ್ಟು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ‘ಕೈ’ ನೆರಳಿನಲ್ಲಿ ತನಿಖೆ ನಡೆಸುವ ಕೈಗಳಿಗೆ ಸ್ವತಂತ್ರ್ಯ ಇರುತ್ತದೆ ಎಂದು ನಿರೀಕ್ಷಿಸಲು ಹೇಗೆ ಸಾಧ್ಯ? ಸದ್ಯ ಇಡಿ ನಡೆಸುತ್ತಿರುವ ತನಿಕೆಯಿಂದ ಮಾತ್ರ ಈ ಹಗರಣದಲ್ಲಿ ಲೂಟಿ ಭಾಗೀದಾರರಾಗಿರುವ ಲೂಟಿಕೋರರನ್ನು ಶಿಕ್ಷಿಸಲು ಸಾಧ್ಯ ಎನ್ನುವುದು ನಾಡಿನ ಜನರ ನಿರೀಕ್ಷೆಯಾಗಿದೆ ಎಂದಿದ್ದಾರೆ.

Previous articleಸೂರ್ಯ ದೇವಸ್ಥಾನಕ್ಕೆ ಯಶ್‌
Next articleಸ್ಥಳೀಯ ಜನರಿಗೆ ಉದ್ಯೋಗ ಅವಕಾಶಕ್ಕೆ ಆಗ್ರಹ