ಕೇರಳ: ಕೇರಳದ ಬಿಜೆಪಿಯ ಪ್ರಮುಖ ಸಂಘ ಪರಿವಾರದ ನಾಯಕರಲ್ಲಿ ಒಬ್ಬರಾದ ಬಿಜೆಪಿಯ ಹಿರಿಯ ನಾಯಕ ಪಿ.ಪಿ.ಮುಕುಂದನ್ (77) ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮಾಧ್ಯಮ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದ ಪಿ.ಪಿ.ಮುಕುಂದನ್ 45 ವರ್ಷಗಳ ಕಾಲ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ನಾಳೆ ಕಣ್ಣೂರಿನಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.
