‘ಕೃಷಿ ಕಾಯಕಯೋಗಿ’ ದೇವೇಂದ್ರಪ್ಪಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ

0
25

ಕುಷ್ಟಗಿ: ಕುಷ್ಟಗಿ ತಾಲೂಕಿನ ಕೆ.ಗೋನಾಳ ಗ್ರಾಮದರಾದ ಪ್ರಗತಿ ಪರ ರೈತ ದೇವೇಂದ್ರಪ್ಪ ಬಳೂಟಗಿ ಅವರಿಗೆ ರಾಯಚೂರ ಕೃಷಿ ವಿವಿಯಲ್ಲಿ ನಡೆದ 14ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಕಾರ್ಯಕ್ರಮ ಜರಗಿತು.
ನಂತರ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ರೈತ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ನಾನು ಕೇವಲ ಎಸ್ಎಸ್ಎಲ್ಸಿ ಓದಿರುವೆ,ನನ್ನ ಕೃಷಿಯಲ್ಲಿನ ಸಾಧನೆ ನೋಡಿ ಡಾಕ್ಟರೇಟ್ ನೀಡಿದ್ದು ಬಹಳ ಖುಷಿಯಾಗಿದೆ.ಇದು ರೈತರಿಗೆ ಸಲ್ಲಬೇಕಾದ ಗೌರವ.ಕೃಷಿ ಲಾಭದಾಯಕವಾಗಿಲ್ಲ ಎಂದು ಅನೇಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ ಕೃಷಿಯನ್ನು ನಂಬಿ ದುಡಿದರೆ ಕೈ ಹಿಡಿಯಲಿದೆ ಎನ್ನುವುದಕ್ಕೆ ನಾನು ಸಾಕ್ಷಿ.ನಾನು ಆರಂಭದಲ್ಲಿ ಗುತ್ತಿಗೆದಾರನಾಗಿದ್ದೆ, ಪ್ರಗತಿಪರ ರೈತರೊಬ್ಬರ ಸಾಧನೆಯಿಂದ ಕೃಷಿ ಕ್ಷೇತ್ರಕ್ಕೆ ಧುಮುಕಿದ್ದೇನೆ.ನಮ್ಮದೆ ದೊಡ್ಡ ಕುಟುಂಬ. 5 ಸಹೋದರರು ಹಾಗೂ ಇಬ್ಬರು ಸಹೋದರಿಯರು. ನಾನು ಹಿರಿಯನಾಗಿದ್ದರಿಂದ ನನ್ನ ಮೇಲೆ ಹೆಚ್ಚು ಜವಾಬ್ದಾರಿ ಇತ್ತು.1947ರಲ್ಲಿ ರೂ.3000ಕ್ಕೆ 13 ಎಕರೆ ತೋಟಗಾರಿಕೆ ಭೂಮಿ ಲೀಸ್ ಪಡೆದು ದಾಳಿಂಬೆ ಬೆಳೆ ಬೆಳೆದು 50 ಸಾವಿರ ಲಾಭ ಪಡೆದೆ. ಕೈತುಂಬ ಹಣ ಬಂದಿದ್ದರಿಂದ ಕೃಷಿಯಲ್ಲಿಯೇ ಬದುಕು ಕಂಡುಕೊಂಡೆ. ಮಾವು, ಶ್ರೀ ಗಂಧ, ತೇಗು ಇತರೆ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಗಳಿಸಿದೆ. ಈಗಿನ ಯುವಕರು ಕೃಷಿಯನ್ನು ಕೇವಲವಾಗಿ ಕಾಣುತ್ತಿದ್ದಾರೆ. ಕೃಷಿ ಭೂಮಿಯನ್ನು ಅಧ್ಯಾಯನ ಮಾಡಿ ವೈಜ್ಞಾನಿಕನ ಕೃಷಿ ಮಾಡಿದರೆ ರೈತನೂ ಹೈಫೈ ಜೀವನ ನಡೆಸಬಹುದು. ಇಂದಿನ ದಿನಗಳಲ್ಲಿ ಕೃಷಿಯಲ್ಲಿ ಹೆಚ್ಚಾಗಿ ರಸಾಯನಿಕ ಗೊಬ್ಬರ ಬಳಸುವುದರಿಂದ ವಿಷಯುಕ್ತ ಆಹಾರ ಸೇವನೆ ಮಾಡುವುದರಿಂದ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಸಾಯನಿಕ ಮುಕ್ತ ಕೃಷಿ ಪದ್ದತಿಯತ್ತ ರೈತರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನವದೆಹಲಿ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ ಮಹಾಕಾರ್ಯದರ್ಶಿ ಡಾ. ಶ್ರೀಮತಿ‌ ಪಂಕಜ್ ಮಿತ್ತಲ್,ಕುಲಪತಿ ಡಾ. ಎಂ. ಹನುಮಂತಪ್ಪ, ಕುಲಸಚಿವ ಡಾ. ದುರಗೇಶ್. ಕೆ. ಆರ್,ಗುರುರಾಜ ಸುಂಕದ, ಜಾಗೃತಿ ದೇಶಮಾನ್ಯ ಹಾಗೂ ಅರುಣಕುಮಾರ ಹೊಸಮನಿ,ಎಂ.ಎಲ್.ಸಿ ಶರಣೇಗೌಡ ಪಾಟೀಲ್ ಬಯ್ಯಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Previous articleಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಹೋರಾಟ ತೀವ್ರಗೊಳಿಸಲು ನಿರ್ಧಾರ
Next articleಧಾರಾಕಾರ ಮಳೆ: ಬೆಳಗಾವಿ-ಗೋವಾ ಸಂಪರ್ಕಿಸುವ ಹೆದ್ದಾರಿ ಬಂದ್