ಕುಂಭಮೇಳಕ್ಕೆ ಹೋದ ವೃದ್ಧ ಕಾಶಿಯಲ್ಲಿ ಸಾವು

0
39

ಚಿಟಗುಪ್ಪ (ಬೀದರ ಜಿ): ಪ್ರಯಾಗರಾಜ್‌ನಲ್ಲಿ ಜರುಗುತ್ತಿರುವ ಮಹಾಕುಂಭಮೇಳಕ್ಕೆ ಹೋದ ತಾಲೂಕಿನ ರಾಂಪೂರ್ ಗ್ರಾಮದ ವೃದ್ಧರೊಬ್ಬರು ಕಾಶಿಯಲ್ಲಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಮಂಗಳವಾರ ಬೆಳಿಗ್ಗೆ ಕಾಶಿ(ವಾರಣಾಸಿ)ಯಲ್ಲಿ ಜರುಗಿದೆ.
ರಾಂಪೂರ್ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಮಂದಿರದ ಮಾಜಿ ಅಧ್ಯಕ್ಷ ಮಚೇಂದ್ರ ಪಾಟೀಲ (೬೯) ಸಾವಿಗೀಡಾಗಿದ್ದಾರೆ. ಕುಟುಂಬ ಬಂಧುಗಳ ಜೊತೆಗೆ ೪ರಂದು ಪ್ರಯಾಗ್‌ರಾಜ್‌ಗೆ ವಾಹನದಲ್ಲಿ ತೆರಳಿದ್ದರು ಎನ್ನಲಾಗುತ್ತಿದೆ. ಮೃತ ದೇಹವನ್ನು ಗ್ರಾಮಕ್ಕೆ ತರಲಾಗುತ್ತಿದ್ದು ಬುಧವಾರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಮೃತರು ೭ ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Previous articleಮೌಲ್ಯಯುತ ಶಿಕ್ಷಣ ಪರಿಣಾಮಕಾರಿ ಜಾರಿ ಅವಶ್ಯ
Next articleಚಿನ್ನದ ದರ ಈಗ 89,600!