ಕಾನೂನಿನ ಮುಂದೆ ನಾವೆಲ್ಲರೂ ಸಮಾನರು

0
17

ಹಾವೇರಿ: ಇಂದು ಶಿಗ್ಗಾಂವ ಪಟ್ಟಣದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಹಾಗೂ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣ ಪ್ರಗತಿ ಪರಿಶೀಲನೆಯನ್ನು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ನಡೆಸಿದರು.
ದರ್ಶನ್ ಪ್ರಕರಣ ಕುರಿತಂತೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು ದರ್ಶನ್ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಸಿಗುವವರೆಗೂ ಚುರುಕುತನ, ನಿಯತ್ತಿನ ತನಿಖೆ ನಡೀಬೇಕು. ಅಮಾನವೀಯವಾಗಿ ವರ್ತಿಸುವ ಅಧಿಕಾರ ಯಾರಿಗೂ ಇಲ್ಲ. ಅಧಿಕಾರದಲ್ಲಿ ಇರುವವರು ಇರಬಹುದು. ಸೆಲೆಬ್ರಿಟಿ ಆಗಬಹುದು. ಯಾರಿಗೂ ವಿಶೇಷ ಅಧಿಕಾರ ಇಲ್ಲ. ಕಾನೂನಿನ ಮುಂದೆ ನಾವೆಲ್ಲರೂ ಸಮಾನರು . ಕಾನೂನನ್ನು ಕೈಗೆ ತೆಗೆದುಕೊಳ್ಳುವುದೇ ಅಪರಾಧ, ಮರ್ಡರ್ ಆಗೋ ಮಟ್ಟಕ್ಕೆ ಹೋದರೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೊಲೆಯಲ್ಲಿ ಹಲವಾರು ರೀತಿ ಇವೆ. ಇದು ಕಾನ್ಫರೆಸಿ ಮಾಡಿ ಮರ್ಡರ್ ಮಾಡಿರೋ ಪ್ರಕರಣವಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದೆ ದರ್ಶನ್ ಪ್ರಕರಣದಲ್ಲಿ ಆರಂಭದಲ್ಲಿ ತನಿಖೆ ಚುರುಕಾಗಿ ನಡೀತಿದೆ . ಕೊನೆಯವರೆಗೂ ಇದೇ ಚುರುಕುತನ, ನಿಯತ್ತು ತನಿಖೆಯಲ್ಲಿರಬೇಕು . ಹಾಗಾದಾಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತೆ ಎಂದರು.

Previous articleತುಮಕೂರು ಕಲುಷಿತ ನೀರು ಪ್ರಕರಣ: ಜಿಲ್ಲಾಸ್ಪತ್ರೆಗೆ ಡಾ.ಜಿ.ಪರಮೇಶ್ವರ್ ಭೇಟಿ
Next article27 ವರ್ಷಗಳ ನಂತರ ಬಾರ್ಡರ್ ಅಂಚಿನಲ್ಲಿ ಸನ್ನಿ