ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಬೆಲ್ಲದ ಬಣ ಪುನರಾಯ್ಕೆ

0
20

ಧಾರವಾಡ: ಇಲ್ಲಿನ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆಯಲ್ಲಿ ಚಂದ್ರಕಾAತ ಬೆಲ್ಲದ ಹಾಗೂ ಶಂಕರ ಹಲಗತ್ತಿ ಬಣ ಪುನರಾಯ್ಕೆಯಾಗಿದೆ.

೧೩೫ ವರ್ಷಗಳ ಸಂಘದ ಇತಿಹಾಸದಲ್ಲಿ ಮೊದಲ ಬಾರಿ ಒಂದು ಬಣದ ಎಲ್ಲ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಸಂಘದ ಅಧ್ಯಕ್ಷರಾಗಿ ಮಾಜಿ ಶಾಸಕ ಚಂದ್ರಕಾAತ ಬೆಲ್ಲದ, ಪ್ರಧಾನ ಕಾರ್ಯದರ್ಶಿಯಾಗಿ ಶಂಕರ ಹಲಗತ್ತಿ ಆಯ್ಕೆಯಾದರು.

ಡಾ. ಸಂಜೀವ ಕುಲಕರ್ಣಿ( ಉಪಾಧ್ಯಕ್ಷ), ಬಸವಪ್ರಭು ಹೊಸಕೇರಿ (ಕಾರ್ಯಾಧ್ಯಕ್ಷ), ಸತೀಶ ತುರಮರಿ ( ಕೋಶಾಧ್ಯಕ್ಷ), ಶಂಕರ ಕುಂಬಿ ( ಸಹ ಕಾರ್ಯದರ್ಶಿ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೈಲಜಾ ಅಮರಶೆಟ್ಟಿ, ಶಿವಾನಂದ ಬಾವಿಕಟ್ಟಿ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಡಾ. ಮಹೇಶ ಹೊರಕೇರಿ, ವೀರಣ್ಣ ವಡ್ಡೀನ, ಶಶಿಧರ ತೋಡಕರ್, ವಿಶ್ವೇಶ್ವರಿ ಹಿರೇಮಠ (ಮಹಿಳಾ ಮೀಸಲು ಸದಸ್ಯೆ), ಪ್ರೊ.ಧನವಂತ ಹಾಜವಗೋಳ (ಎಸ್.ಟಿ. ಮೀಸಲು ಸದಸ್ಯ). ಆಯ್ಕೆಗೊಂಡಿದ್ದಾರೆ. ಶಶಿಧರ ತೋಡಕರ್ ಈ ಸಲ ಕಣಕ್ಕಿಳಿದಿದ್ದರು.

ಒಟ್ಟು ೧೫ ಸ್ಥಾನಗಳಿಗೆ ಚುನಾವಣೆ ನಡೆಯಿತು. ಪಾಪು ಅಭಿಮಾನಿ ಬಳಗದ ಪರವಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರೆ, ಹಿರಿಯ ನ್ಯಾಯವಾದಿ ಪ್ರಕಾಶ ಉಡಿಕೇರಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸೆಣಸಿದ್ದರು.

Previous articleಗ್ಯಾರಂಟಿಗಳು ಅರ್ಧಕ್ಕರ್ಧ ಜನರಿಗೆ ತಲುಪಿಲ್ಲ
Next articleದ.ಕ ಜಿಲ್ಲೆ: ಅಂಗನವಾಡಿಯಿಂದ ಪಿಯು ಕಾಲೇಜುಗಳಿಗೆ ಎರಡು ದಿನ ರಜೆ ಘೋಷಣೆ