Home News ಕಮಿಷನ್ ಹೊಡೆಯುವುದೇ ಸರ್ಕಾರದ ದೊಡ್ಡ ಸಾಧನೆ

ಕಮಿಷನ್ ಹೊಡೆಯುವುದೇ ಸರ್ಕಾರದ ದೊಡ್ಡ ಸಾಧನೆ

ಕಲಬುರಗಿಯಲ್ಲಿ ಚಲವಾದಿ ನಾರಾಯಣ ಸ್ವಾಮಿ ಆರೋಪ
ಕಲಬುರಗಿ: ಭ್ರಷ್ಟಾಚಾರದ ಕಮಿಷನ್ ಹೊಡೆಯುವುದೇ ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರಿಗಳು ತಮ್ಮ ಅಂಗಡಿ ಬೆಳಗ್ಗೆ ಓಪನ್ ಮಾಡಿ ದೇವರೇ ಇವತ್ತು ವ್ಯಾಪಾರ ಚೆನ್ನಾಗಿ ಆಗಲಿದೆಂದು ದೇವರಲ್ಲಿ ಬೇಡಿಕೊಳ್ಳುವ ರೀತಿಯಲ್ಲಿ ಈ ಸರ್ಕಾರ, ಸಚಿವರು ಕಚೇರಿ ತೆರೆದ ಬಳಿಕ ಭ್ರಷ್ಟಾಚಾರದ ಒಳ್ಳೆ ವ್ಯಾಪಾರ ಆಗಲಿವೆಂದು ಬೇಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ಸಿದ್ದರಾಮಯ್ಯ ಅವರ ಹೆಂಡತಿಯ ಅಣ್ಣ 5 ಲಕ್ಷಕ್ಕೆ ಜಮೀನು ಪಡೆದು 62 ಕೋಟಿ ಕೊಡುವಂತೆ ಕೇಳಿದ್ದರು. ಖರ್ಗೆ ಕುಟುಂಬ ಏರ್ಪೋರ್ಟ್ ಪಕ್ಕದಲ್ಲೇ 5 ಎಕರೆ ಜಮೀನು ಪಡೆದರು ಇಲ್ಲಿಗಲ್ ಎಂದು ಗೊತ್ತಾದ ಬಳಿಕ ಇಬ್ಬರು ರಾತ್ರೋರಾತ್ರಿ ವಾಪಸ್ ಕೊಟ್ಟರು ಎಂದು ಹರಿಹಾಯ್ದರು.
ಶಾಪವಾದ ವಸೂಲಿ ಸರ್ಕಾರ ಅನ್ನೋ ಟ್ಯಾಗ್‌ಲೈನ್ ಹೊಂದಿರುವ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದ ನಾರಾಯಣ ಸ್ವಾಮಿ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ ಮಾಡಿದೆ. ನನ್ನ ಪ್ರಕಾರ ಕಾಂಗ್ರೆಸ್ ಸಾಧನೆಗಳು ಶೂನ್ಯ, ಜನರ ವೇದನೆಗಳ ಸಮಾವೇಶ ಆಗಬೇಕಿತ್ತು ಎಂದರು.
ಬೆಂಗಳೂರಿನ ರಸ್ತೆಯಲ್ಲಿ ಜನರಿಗೆ ಓಡಾಡೋದಕ್ಕೆ ಆಗುತ್ತಿಲ್ಲ. ಚರಂಡಿ ಬ್ಲಾಕ್ ಆಗಿ ಕೆಟ್ಟ ನೀರು ರಸ್ತೆ ಮೇಲೆ ಮತ್ತು ಮನೆಗೆ ನುಗ್ಗುತ್ತಿವೆ. ಜನ ಗಾಡಿಯಲ್ಲಿ ನಡೆದುಕೊಂಡು ಹೋಗೊಕೆ ಆಗೋದಿಲ್ಲ. ಬಹುಶಃ ಸರ್ಕಾರ ವಾಟರ್ ಬೋಟ್ ಕೊಡಬೇಕಾಗುತ್ತೆ. ಮುಖ್ಯಮಂತ್ರಿ ಆ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದರು.

ರಾಹುಲ್‌ಗೆ ಮತಿಭ್ರಮಣೆ ಆಗಿದೆ
ರಾಹುಲ್ ಗಾಂಧಿಗೆ ಮತಿಭ್ರಮಣೆ ಆಗಿದೆಯೋ ಏನೋ ಗೊತ್ತಿಲ್ಲ. ಯುದ್ಧ ಕುರಿತು ಅವಿವೇಕಿತನದ ಮಾತನಾಡುತ್ತಾರೆ. ನಮ್ಮ ಎಷ್ಟು ಪ್ಲೈಟ್ ಹೊಡೆದುರುಳಿಸಿದ್ರು ಎಂದು ಪ್ರಶ್ನೆ ಕೇಳುವ ಇವರು, ಅನ್ ಫಿಟ್ ಫಾರ್ ಅಪೋಸಿಶನ್ ಲೀಡರ್ ಎಂದು ನಾರಾಯಣಸ್ವಾಮಿ ಹೇಳಿದರು.
ಮಲ್ಲಿಕಾರ್ಜುನ್ ಖರ್ಗೆ ಚುಟ್ ಪುಟ್ ಯುದ್ಧ ನಮ್ಮ ಪಾಕಿಸ್ತಾನವೆಂದು ಹೇಳಿದ್ದಾರೆ. ಹಾಗಾದರೆ ನೀವು ಯಾರ ಪರ ಇದ್ದಿರೆಂದು ಕೂಡಲೇ ಘೋಷಣೆ ಮಾಡಬೇಕು ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಮಾತೆತ್ತಿದ್ದರೆ ಪ್ರಧಾನ ಮಂತ್ರಿಯವರ ಬಗ್ಗೆ ಮಾತನಾಡುತ್ತಾರೆ. ಪ್ರಿಯಾಂಕ್‌ರವರೆ ನೀವೇನಾದ್ರು ಕೇಳಬೇಕಾದ್ರೆ ನಿಮ್ಮ ಪ್ರಶ್ನೆಗಳನ್ನು ನಿಮ್ಮ ತಂದೆಯವರಿಗೆ ಹೇಳಿ ಅವರು ಮೋದಿಯವರಿಗೆ ಕೇಳುತ್ತಾರೆ. ಮಲ್ಲಿಕಾರ್ಜುನ್ ಖರ್ಗೆಯವರು ಅಷ್ಟು ಬುದ್ದಿವಂತರು ಅಲ್ವಾ. ಆನೆ (ಮೋದಿ) ಹೋಗುತ್ತಿದ್ದರೆ ನಾಯಿ ಬೊಗಳಿದಂತೆ ಬೌ ಬೌವೆಂದು ಬೊಗಳುತ್ತಿರಾ ಎಂದು ಪ್ರಿಯಾಂಕ್ ಖರ್ಗೆ ಅವರನ್ನು ನಾಯಿ ಎಂದು ಕರೆದರು.

Exit mobile version