Home ನಮ್ಮ ಜಿಲ್ಲೆ ಉತ್ತರ ಕನ್ನಡ ಕಪ್ಪೆಚಿಪ್ಪು ತೆಗೆಯಲು ನದಿಯಲ್ಲಿ ಇಳಿದಿದ್ದ ತಾಯಿ ಮಗಳು ಸಾವು!

ಕಪ್ಪೆಚಿಪ್ಪು ತೆಗೆಯಲು ನದಿಯಲ್ಲಿ ಇಳಿದಿದ್ದ ತಾಯಿ ಮಗಳು ಸಾವು!

0

ಕಾರವಾರ: ಕಪ್ಪೆಚಿಪ್ಪು ತೆಗೆಯಲು ಇಳಿದಿದ್ದ ತಾಯಿ ಮಗಳು ಇಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಾರವಾರ ತಾಲ್ಲೂಕಿನ ಬೈತಖೋಲ್ ಗ್ರಾಮದಲ್ಲಿ ಇಂದು ನಡೆದಿದೆ.
ಬೈತಖೋಲದ ರೇಣುಕಾ ಹಾಗೂ ಸುಜಾತ ಮೃತ ತಾಯಿ ಮಗಳಾಗಿದ್ದಾರೆ. ಮುಂಜಾನೆ ಕಾಳಿ ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ನದಿಯಲ್ಲಿ ಮುಳುಗಿದಾಗ ಈ‌ ದುರ್ಘಟನೆ ಸಂಭವಿಸಿದ. ಮೃತ ದೇಹವನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಹುಡುಕಿ ದಡಕ್ಕೆ ತಂದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version