ಕುಮಟಾ: ಹಿಂಸಾತ್ಮವಾಗಿ ಎತ್ತುಗಳನ್ನು ಸಾಗಿಸುತ್ತಿದ್ದ ಕಂಟೇನರ್‌ವೊಂದನ್ನು ಇಲ್ಲಿನ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸ್ ಮಯೂರ್ ಪಟ್ಟಣಶೆಟ್ಟಿ ಅವರು ವಾಹನ, ಜಾನುವಾರು ಹಾಗೂ ಓರ್ವ ಆರೋಪಿಯನ್ನು ವಶಕ್ಕೆ ತೆಗೆದುಕೊಂಡ ಘಟನೆ ಗುರುವಾರ ಮಧ್ಯಾಹ್ನ ಇಲ್ಲಿನ ಹೆದ್ದಾರಿಯಲ್ಲಿರುವ ಹೊಳೆಗದ್ದೆ ಟೋಲ್ ಗೇಟ್ ಸಮೀಪ ನಡೆದಿದೆ.
ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಅನ್ಸಾರಿ ಮಹಮ್ಮದ ಸಲ್ಮಾನ್ ಬಂಧಿಸಿದ್ದಾರಲ್ಲದೆ, ಇತನ ಜೊತೆ ವಾಹನದಲ್ಲಿದ್ದ ಮಹಾರಾಷ್ಟ್ರದ ಸಮೀರ್ ಸೇಟ್, ಜಾವೇದ ಮುಲ್ಲಾ ಹಾಗೂ ಭಟ್ಕಳದ ಹನಿಪಾದ್ ನಿವಾಸಿ ಅಶೀಪ್ ಕೋಲಾ ತಂದೆ ಲಫೀಜ್ ಕೋಲಾ, ಅಜಾದನಗರದ ಅಪ್ಬಲ್ ಖಾಸಿಂಜಿ ತಂದೆ ತಲ್ವಾ ಖಾಸಿಂಜಿ ಪೊಲೀಸರನ್ನು ಕಂಡು ವಾಹನದಿಂದ ಇಳಿದು ಓಡಿ ಪರಾರಿಯಾದರು ಎನ್ನಲಾಗಿದೆ.
ಈ ವಾಹನದಲ್ಲಿ 14 ಎತ್ತುಗಳನ್ನು ಸಾಗಿಸಲಾಗುತ್ತಿತ್ತು, ಇದರಲ್ಲಿ 5 ಎತ್ತುಗಳು ಹಿಂಸೆ ಹಾಗೂ ನೀರು ಆಹಾರವಿಲ್ಲದೆ ಬಳಲಿವೆ. ವಶಪಡಿಸಿಕೊಂಡ ವಾಹನ, ಆರೋಪಿ ಹಾಗೂ ಜಾನುವಾರುಗಳನ್ನು ಠಾಣೆಯ ಪಿಎಸ್‌ಐ ಮಂಜುನಾಥ ಗೌಡರ್ ಅವರಿಗೆ ಒಪ್ಪಿಸಲಾಗಿದ್ದು, ಪಿಎಸ್‌ಐ ಮಂಜುನಾಥ ಗೌಡರ್ ತನಿಖೆ ಕೈಗೊಂಡಿದ್ದಾರೆ.