ಹುಬ್ಬಳ್ಳಿ: ಹೊರಗೆ ಸಿದ್ದರಾಮಯ್ಯನವರ ಪರವಾಗಿ ಬಂಡೆ ತರ ನಿಂತಿದ್ದೇವೆ ಎನ್ನುತ್ತಾರೆ. ಆದರೆ ಒಳೊಳಗೆ ಸಿಎಂ ಕುರ್ಚಿಗಾಗಿ ಸಾಲುಗಟ್ಟಿ ನಾಯಕರು ನಿಂತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.
ರವಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರವಾಗಿ ಮೊದಲು ಆರ್.ವಿ. ದೇಶಪಾಂಡೆ ನಾನು ರೆಡಿ ಅಂದರು. ಆಮೇಲೆ ಜಿ.ಪರಮೇಶ್ವರ, ಡಿ.ಕೆ ಶಿವಕುಮಾರ್ ಅಂತೂ ಮೊದಲು ಕಾಯುತ್ತಿದ್ದಾರೆ. ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಇದ್ದಾರೆ. ಜಾರಕಿಹೊಳಿಯವರು ಇನ್ನಷ್ಟು ದಿನಕ್ಕೆ ಪೋಸ್ಟರ್ ಹಾಕ್ತಾರೆ. ಈಗಾಗಲೇ ಪೋಸ್ಟರ್ ಹಾಕಿದ್ದಾರೆ ಅನ್ನೋ ಮಾಹಿತಿ ಇದೆ. ಕಾಂಗ್ರೆಸ್‌ನವರು ಮೊದಲು ತಮ್ಮ ಮನೆ ಸರಿ ಮಾಡಿಕೊಳ್ಳಲಿ ನಂತರ ಅಭಿವೃದ್ಧಿ ಬಗ್ಗೆ ಮಾತಾಡಲಿ ಎಂದರು.